ನ್ಯೂಸ್

ರೈತರೊಂದಿಗೆ 40ನೇ ವಿವಾಹ ವಾರ್ಷಿಕೋತ್ಸವ ಸೆಲೆಬ್ರೆಟ್​​ ಮಾಡಿದ ದಂಪತಿ; ಹರಿದು ಬಂತು ಮೆಚ್ಚುಗೆಯ ಮಹಾಪೂರ

ಆಂಧ್ರಪ್ರದೇಶ: ಹುಟ್ಟುಹಬ್ಬ, ಮದುವೆ ಹಾಗೂ ಕುಟುಂಬದ ಯಾವುದೇ ಸಂತೋಷದ ಕಾರ್ಯಕ್ರಮದಲ್ಲಿ ಸಂಬಂಧಿಕರನ್ನು ಮನೆಗೆ ಕರೆದು ಸಂಭ್ರಮಿಸುತ್ತೇವೆ. ಆದರೆ ಇಲ್ಲೊಂದು ಜೋಡಿ 40 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಈ ಬಾರಿ ಅನ್ನದಾತರನ್ನು ಮನೆಗೆ ಕರೆದು ಆತಿಥ್ಯ ನೀಡುವ ವಿನೂತ ಯೋಚನೆ ಮಾಡಿದ್ದಾರೆ.

ಮಡುಪಲ್ಲಿ ವೆಂಕಟ ಮೋಹನ ಶ್ರೀನಿವಾಸ ರಾವ್ ಮತ್ತು ತೆನಾಲಿಯ ಲಕ್ಷ್ಮೀ ಪದ್ಮಜಾ ದಾಂಪತ್ಯ ಜೀವನಕ್ಕೆ ನಲವತ್ತು ವರ್ಷ ಪೂರೈಸಿದೆ. ಅವರು ತಮ್ಮ 40 ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಬಯಸಿದ್ದರು. ಇಷ್ಟು ವರ್ಷ ಸ್ನೇಹಿತರನ್ನು, ಕುಟುಂಬಸ್ಥರನ್ನು ಕರೆಸಿಕೊಂಡು ಬಂದಿದ್ದೇವೆ, ಆದರೆ ಸಮಾಜದ ಹಿತ ಬಯಸುವ ರೈತರನ್ನು ಯಾವತ್ತೂ ಒಳ್ಳೆಯ ಕೆಲಸಕ್ಕೆ ಕರೆದಿಲ್ಲ.. ಈ ಬಾರಿ ಅವರನ್ನು ಆಹ್ವಾನಿಸಲೇಬೇಕು ಎಂದು ಕುಟುಂಬಸ್ಥರಿಗೆ ತಿಳಿಸಿದರು. ಶ್ರೀನಿವಾಸರಾವ್ ಅವರ ನಿರ್ಧಾರಕ್ಕೆ ಮನೆ ಮಂದಿ ಕೂಡಾ ಒಪ್ಪಿಗೆ ನೀಡಿದರು.

ಶ್ರೀನಿವಾಸ ರಾವ್ ಮತ್ತು ಲಕ್ಷ್ಮೀ ಪದ್ಮಜಾ ಅವರು ತೆನಾಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಲವತ್ತು ರೈತರಿಗೆ ಆಹ್ವಾನ ನೀಡಲು ನಿರ್ಧಾರ ಮಾಡಿದರು. ಸ್ವತಃ ದಂಪತಿಯೇ ರೈತರ ಮನೆಗೆ ಹೋಗಿ ಅವರೆಲ್ಲರನ್ನೂ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಬರುವಂತೆ ಆಹ್ವಾನಿಸಿದರು.
ದಂಪತಿ ಆಸೆ ಹಾಗೆ ರೈತರಲ್ಲರೂ ಶ್ರೀನಿವಾಸ್​​ ಅವರ 40ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಭಾಗಿಯಾದರು. ಊಟ ಬಡಿಸುವುದಲ್ಲದ ಎಲ್ಲರನ್ನೂ ಗೌರವಿಸಿದರು ಈ ದಂಪತಿ. ಅವರಿಗೆ ಶಾಲು ಹೊದಿಸಿ, ಹೊಸ ಬಟ್ಟೆಗಳನ್ನು ನೀಡಿ ವಿಶೇಷವಾಗಿ ರೈತನ ಪ್ರತೀಕವಾದ ಸ್ಕಾರ್ಫ್‌ ನೀಡಿ ಗೌರವಿಸಲಾಯಿತು.

ತಮ್ಮನ್ನು ಯಾರೂ ಗುರುತಿಸಿ ಈ ರೀತಿ ಸನ್ಮಾನಿಸಿಲ್ಲ, ವಿಶೇಷವಾಗಿ ಆಹ್ವಾನಿಸಿ ಸನ್ಮಾನಿಸಿದ ಶ್ರೀನಿವಾಸ ರಾವ್ ದಂಪತಿ ನೂರು ವರ್ಷ ಬದುಕಲಿ ಎಂದು ಅತಿಥಿಯಾಗಿ ಆಗಮಿಸಿದ ರೈತರು ಮನಸಾರೆ ಆಶೀರ್ವದಿಸಿದ್ದಾರೆ.