ನ್ಯೂಸ್

ದೇಶಕ್ಕೆ 5ನೇ ಸ್ಥಾನ ಪಡೆದ ಪೊಲೀಸ್​ ಕಾನ್ಸಸ್ಟೆಬಲ್​ನ ಪುತ್ರಿ

ರಾಣೆಬೆನ್ನೂರ: ಕೇಂದ್ರ ಸರ್ಕಾರ ನಡೆಸುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಅರಣ್ಯ ಶಾಸ್ತ್ರ (ಐಸಿಎಆರ್​) ವಿಷಯದ ಸಾಮಾನ್ಯ ಪ್ರವೇಶ (ಸಿಇಟಿ) ಪರೀೆಯಲ್ಲಿ ನಗರದ ವಿದ್ಯಾಥಿರ್ನಿ ಸುಪ್ರೀಯಾ ನೀಡನೇಗಿಲ ದೇಶಕ್ಕೆ 5ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಇವರು ಮಡಿಕೇರಿ ಜಿಲ್ಲೆ ಪೊನ್ನಮ್​ಪೇಟೆ ಾರೆಸ್ಟ್ರಿ ಕಾಲೇಜ್​ನಲ್ಲಿ ಬಿಎಸ್​ಸ್ಸಿ ಪದವಿ ಪಡೆದು ಇದೀಗ ಕೃಷಿ ಸಂಶೋಧನಾ ಮಂಡಳಿ ಮತ್ತು ಅರಣ್ಯ ಶಾಸ್ತ್ರ ವಿಷಯದ ಸಾಮಾನ್ಯ ಪ್ರವೇಶ ಪರೀೆ ಬರೆದು ದೇಶಕ್ಕೆ 5ನೇ ಸ್ಥಾನ ಪಡೆದಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ ಕೇಂದ್ರ ಸರ್ಕಾರದ ಕೋಟಾದಡಿ ಸೀಟು ಪಡೆದುಕೊಂಡಿದ್ದಾರೆ. ಇವರ ತಂದೆ ಸುರೇಶ ನಿಡನೇಗಿಲ ಪೊಲೀಸ್​ ಇಲಾಖೆಯ ರಾಣೆಬೆನ್ನೂರಿನಲ್ಲಿ ಮುಖ್ಯ ಕಾನ್ಸ್​ಸ್ಟೆಬಲ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.