ನ್ಯೂಸ್

ಶ್ರೀನಿವಾಸ ಪ್ರಸಾದ್, ನಾಗಮ್ಮ ಕೇಶವಮೂರ್ತಿ ಸೇರಿ ಅಗಲಿದ 15 ಗಣ್ಯರಿಗೆ ಮೇಲ್ಮನೆಯಲ್ಲಿ ಶ್ರದ್ಧಾಂಜಲಿ

ಬೆಂಗಳೂರು:
ವಿಧಾನ ಪರಿಷತ್‌ನಲ್ಲಿ ಅಗಲಿದ ಗಣ್ಯರಿಗೆ 15 ಗಣ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು.
ಮಾಜಿ ಸಚಿವರುಗಳಾದ ವಿ.ಶ್ರೀನಿವಾಸ ಪ್ರಸಾದ್, ನಾಗಮ್ಮ ಕೇಶವಮೂರ್ತಿ, ಎಂ.ಪಿ.ಕೇಶವಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಾಟೀಲ ಸುನಂದಾ ನಿಂಗನಗೌಡ, ಟಿ.ಕೆ.ಚಿನ್ನಸ್ವಾಮಿ, ಇಕ್ಬಾಲ್ ಅಹಮದ್ ಸರಡಗಿ, ಎಂ.ಬಿ.ಭಾನುಪ್ರಕಾಶ್, ಚಿತ್ರ ನಿರ್ದೇಶಕ ದ್ವಾರಕೀಶ್, ಕಲಾವಿದೆ ಗಿಡಿಗೆರೆ ರಾಮಕ್ಕ, ಯಕ್ಷಗಾಣ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಬಡಗು ತಿಟ್ಟು ಯಕ್ಷಗಾಣ ಕಲಾವಿದ ಪೇತ್ರಿ ಮಾಧವ ನಾಯ್ಕ, ಪದ್ಮಶ್ರೀ ಪ್ರಶಸ್ತಿ ಸರೋದ್ ವಾದಕ ರಾಜೀವ್ ತಾರಾನಾಥ್, ರಂಗಕರ್ಮಿ ಡಾ.ನಟೇಶ್ ರತ್ನ, ನಾಡೋಜ ಸಾಹಿತಿ ಕಮಲಾ ಹಂಪನಾ, ನಟಿ ಮತ್ತು ನಿರೂಪಕಿ ಅಪರ್ಣ ಅವರುಗಳಿಗೆ ಸಂತಾಪ ಸೂಚಕ ನಿರ್ಣಯವನ್ನು ಸಭಾಪತಿ ಬಸವರಾಜ ಹೊರಟ್ಟಿ ಮಂಡನೆ ಮಾಡಿದರು. ಸಭಾನಾಯಕ ಬೋಸರಾಜ್ ಅನುಮೋದಿಸಿ ಮಾತನಾಡಿದರು.
ಸದನದಲ್ಲಿ ಒಂದು ನಿಮಿಶ ಮೌನಾಚರಣೆ ಮಾಡಿ ಅಗಲಿದ ಗಣ್ಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.