ನ್ಯೂಸ್

ಮೇಲ್ಮನೆಯಲ್ಲಿ 2 ವಿಧೇಯಕಗಳಿಗೆ ಅಸ್ತು

Bengaluru - Political - Shivananda Tagadur

ಬೆಂಗಳೂರು:
ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ 2024 ಮತ್ತು ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕಗಳಿಗೆ ವಿಧಾನ ಪರಿಷತ್ ಅಸ್ತು ಎಂದಿದೆ.
ಕಳೆದ ಅಧಿವೇಶನ ಸಮಯದಲ್ಲಿ ಈ ವಿಧೇಯಕಗಳನ್ನು ಪರಿಷತ್ತಿನ ಪರಿಶೀಲನಾ ಸಮಿತಿಗೆ ವಹಿಸಲಾಗಿತ್ತು. ಪರಿಶೀಲನಾ ಸಮಿತಿ ನೀಡಿರುವ ಶಿಾರಸ್ಸುಗಳನ್ನು ಪರಿಗಣಿಸಲಾಗಿದೆ.
ಸದನದಲ್ಲಿ ಸಹಕಾರ ಸಚಿವ ರಾಜಣ್ಣ ವಿಧೇಯಕ ಮಂಡಿಸಿದ ಬಳಿಕ ಧ್ವನಿ ಮತದಿಂದ ಅಂಗೀಕರಿಸಲ್ಪಟ್ಟಿತು.