ದೆಹಲಿ: ಆರೋಗ್ಯ ಸೇತು ಅಪ್ಲಿಕೇಷನ್ ಅಳವಡಿಸಿಕೊಂಡ ನಂತರವಷ್ಟೇ ಜನರು ರಾಜಧಾನಿಗೆ ಪ್ರವೇಶಿಸಲು ಸರ್ಕಾರ ಅವಕಾಶ ನೀಡಬೇಕೆಂದು ರಾಷ್ಟ್ರೀಯ ರೋಗ ನಿಯಂತ್ರಣ ಸಂಸ್ಥೆ ನಿರ್ದೇಶಕ ಸುರ್ಜೀತ್ಕುಮಾರ್ ಸಿಂಗ್ ಬಲವಾಗಿ ಶಿಫಾರಸು ಮಾಡಿದರು.
ಶುಕ್ರವಾರ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಕುರಿತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಪರಿಶೀಲನಾ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ.
ಡಾ. ಸಿಂಗ್ ರಾಜಧಾನಿಯಲ್ಲಿ ಹೆಚ್ಚಿನ ಜನರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರಲ್ಲದೆ 3,5,14 ನೇ ದಿನದಂದು ಪುನರಾವತಿರ್ತ ಪರೀಕ್ಷೆಗೆ ಒತ್ತಾಯಿಸಿದರು. ಈ ರೀತಿಯ ಪುನರಾವತಿರ್ತ ಪರೀಕ್ಷೆಯಿಂದ ಕೋವಿಡ್ - 19 ಪಾಸಿಟಿವ್ ಇರುವ ವ್ಯಕ್ತಿ ಸುಳ್ಳು ವರದಿಯಿಂದ ಹೊರಗುಳಿಯುವುದಿಲ್ಲ. ಆರೋಗ್ಯ ಸೇತು ಆ್ಯಪ್ನ ಶಿಫಾರಸು ಬಗ್ಗೆ ಇಲ್ಲಿಯ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಆ ವಿಚಾರವನ್ನೂ ಕಡೆಗಣಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮೊಬೈಲ್ ಅಪ್ಲಿಕೇಷನ್ ಅನ್ನು ಕಡ್ಡಾಯಗೊಳಿಸುವ ದೊಡ್ಡ ಸಮಸ್ಯೆ ಎಂದರೆ ಸ್ಮಾರ್ಟ್ಫೋನ್ ಹೊಂದಿಲ್ಲದ ಲಕ್ಷಾಂತರ ಜನರಿರಬಹುದು. ಭಾರತದಲ್ಲಿ 1.2 ಬಿಲಿಯನ್ ಮೊಬೈಲ್ ಫೋನ್ಗಳಿವೆ, ಕೇವಲ 350 ಮಿಲಿಯನ್ ಜನರು ಮಾತ್ರ ಸ್ಮಾರ್ಟ್ಫೋನ್ಗಳನ್ನು ಹೊಂದಿದ್ದಾರೆ.
ದೆಹಲಿಯಲ್ಲಿ ಶೇ 80 ಸ್ಮಾರ್ಟ್ಫೋನ್ ಗಳಿವೆ ಎಂದು ತಿಳಿದುಬಂದಿದೆ. ಸಾಧಕ ಬಾಧಕಗಳನ್ನು ತಿಳಿಯಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏರ್ಪೋರ್ಟ್ಗಳು ಹಾಗೂ ದೆಹಲಿ ಮೆಟ್ರೋದಲ್ಲಿ ಪ್ರಮುಖ ಭದ್ರತೆಯ ಹೊಣೆು ಹೊತ್ತಿರುವ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್ಎ) ಇದೇ ರೀತಿಯ ಶಿಫಾರಸು ಮಾಡಿದೆ.