ನ್ಯೂಸ್

ಆಗಾಗ ಕೈತೊಳೆಯುವ ಸರಳ ಅಭ್ಯಾಸವೇ ಕರೊನಾದಿಂದ ರಕ್ಷಣೆ ಪಡೆಯುವ ತಂತ್ರ

kumarvrl

ಬೆಂಗಳೂರು: ಆಗಾಗ ಕೈ ತೊಳೆಯು ಸರಳ ಅಭ್ಯಾಸ ಮೈಗೂಡಿಸಿಕೊಳ್ಳುವುದು ಕರೊನಾ ವಿರುದ್ಧ ಹೋರಾಡುವ ಪ್ರಮುಖ ರಕ್ಷಣಾ ತಂತ್ರವಾಗಿದೆ ಎಂದು ಆರೋಗ್ಯ ಮತ್ತು ನೈರ್ಮಲ್ಯ ತಜ್ಞರು ತಿಳಿಸಿದ್ದಾರೆ.

ಆಗಾಗ ಕೈತೊಳೆದುಕೊಳ್ಳುವುದು ಹಲವು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಪರಿಣಾಮಕಾರಿ ಮಾರ್ಗವಾಗಿದೆ.

ಕೈಗಳನ್ನು ಸಾಬೂನಿಂದ ತೊಳೆದುಕೊಳ್ಳಲುವ ಮೂಲಕ ನಮ್ಮನ್ನು ನಾವು ಹಾಗೂ ಸಮುದಾಯವನ್ನು ಕರೊನಾ ವೈರಸ್​ನಿಂದ ರಕ್ಷಣೆ ಮಾಡಲು ಸಾಧ್ಯವಿದೆ.

ಕರೊನಾ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್​ಗಳು ಸಣ್ಣ ಹನಿಗಳ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಯ ಸ್ಪರ್ಶ ಹಾಗೂ ಅವರ ಬಳಿ ನಿಂತು ಉಸಿರಾಡಿದಾಗ ಈ ರೋಗ ಹರಡುವ ಸಾಧ್ಯತೆ ಇದೆ.

ಸಾಬೂನು ಅಲ್ಲದೆ ಶೇ.60ರಷ್ಟು ಆಲ್ಕೋಹಾಲ್​ ಅಂಶ ಇರುವ ಹ್ಯಾಂಡ್​ರಬ್​ ಅನ್ನು ಬಳಸಬಹುದು.

ಕರೊನಾ ವೈರಸ್​ಗೆ ಯಾವುದೇ ಲಸಿಕೆ ಇಲ್ಲದ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೇ ಮುಖ್ಯವಾಗಿದೆ ಎಂದು ಅಪೋಲೊ ಆಸ್ಪತ್ರೆ ಸಂಸ್ಥಾಪಕ ಡಾ. ಪ್ರತಾಪ ಸಿ. ರೆಡ್ಡಿ ತಿಳಿಸಿದ್ದಾರೆ.