ನ್ಯೂಸ್

ಮಹಾರಾಷ್ಟ್ರದತ್ತ ಮೂರನೇ ಅಲೆ!

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಕೋವಿಡ್​- 19 ಎರಡನೇ ಅಲೆ ಅಬ್ಬರ ತಗ್ಗಿತೆಂದು ನಿಟ್ಟುಸಿರು ಬಿಡುವಷ್ಟರಲ್ಲೇ 3ನೇ ಅಲೆಯ ಆತಂಕ ಶುರುವಾಗಿದೆ. ಮುಂದಿನ 2&4 ವಾರದೊಳಗೆ ಮಹಾರಾಷ್ಟ್ರ ಅಥವಾ ಮುಂಬೈ ನಗರಕ್ಕೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆಯೆಂದು ಮಹಾರಾಷ್ಟ್ರ ಕೋವಿಡ್​ ಕಾರ್ಯಪಡೆ ಗಂಭೀರ ಎಚ್ಚರಿಕೆ ನೀಡಿದೆ. ಮೂರನೇ ಅಲೆಗೆ ಮುನ್ನೆಚ್ಚರಿಕೆ ವಹಿಸುವ ಕುರಿತು ಸಿಎಂ ಉದ್ಧವ್​ ಠಾಕ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಪಡೆಯ ಸದಸ್ಯರು ಈ ಬಗ್ಗೆ ವರದಿ ನೀಡಿದ್ದಾರೆ.

ಮೊದಲ ಎರಡು ಅಲೆಗಳಿಂದ ತಪ್ಪಿಸಿಕೊಂಡಿದ್ದ ಅಥವಾ ಅತ್ಯಧಿಕ ಪ್ರಮಾಣದಲ್ಲಿ ಪ್ರತಿಕಾಯಗಳನ್ನು ಕಳೆದುಕೊಂಡಿರುವ ವರ್ಗದಲ್ಲಿ 3ನೇ ಅಲೆ ಪರಿಣಾಮ ಹೆಚ್ಚಿರಲಿದೆ ಎಂದು ತಜ್ಞರು ಹೇಳಿದ್ದಾರೆ.

ಮಕ್ಕಳು ನಿರಾತಂಕ: ಇದುವರೆಗೆ ಸೋಂಕಿಗೆ ತುತ್ತಾಗದ ಕೆಳ&ಮಧ್ಯಮ ವರ್ಗದ ಕ್ಲಸ್ಟರ್​ಗಳಲ್ಲಿ ಮಕ್ಕಳಿಗೆ ಅಪಾಯವಾಗದು ಎಂದು ಕಾರ್ಯಪಡೆ ಹೇಳಿದೆ.

ವರದಿಯಲ್ಲೇನಿದೆ?

  • 2ನೇ ಅಲೆಯಲ್ಲಿ ದಾಖಲಾದ ಪ್ರಕರಣ ಗಳಿಗಿಂತ 2 ಪಟ್ಟು ಕೇಸ್​ ಹೆಚ್ಚಳ
  • ಸಕ್ರಿಯ ಪ್ರಕರಣಗಳು 8 ಲಕ್ಷ ತಲುಪಬಹುದು
  • ಶೇ.10 ಮಕ್ಕಳು ಅಥವಾ ಯುವ ವಯಸ್ಕರಲ್ಲೂ ಸೋಂಕು ಕಾಣಿಸಿಕೊಳ್ಳಬಹುದು.

ಕಾರಣ ಏನು?
* ಕೆಲವು ದಿನಗಳಿಂದ ಹೆಚ್ಚಿದ ಜನರ ಓಡಾಟ
* ಜನರ ಗುಂಪುಗೂಡು ವಿಕೆಗೆ ಬೀಳದ ಕಡಿವಾಣ
* ಮಾಸ್ಕ್​ ಇಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು
* ಲಾಕ್​ಡೌನ್​ ರ್ನಿಬಂಧಗಳನ್ನು ತೆರವುಗೊಳಿಸಿರುವುದು