ನ್ಯೂಸ್

ಇಂಡಿಯಾಗೆ ಬಂದ ಕರೊನಾ ವೈರಸ್​ ಈಗ ಮಂಡ್ಯಕ್ಕೂ ಕಾಲಿಟ್ಟಿತಾ..; 47 ವರ್ಷದ ಮಹಿಳೆ ಮಿಮ್ಸ್​ಗೆ ದಾಖಲು..

ಮಂಡ್ಯ: ಭಾರತದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು ಕರ್ನಾಟಕದಲ್ಲೇ ಎರಡು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಓರ್ವ ವೃದ್ಧ ಕರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾನೆ. ಹಲವು ಜಿಲ್ಲೆಗಳಲ್ಲಿ ಶಂಕಿತ ಕರೊನಾ ವೈರಸ್ ಸೋಂಕಿತರನ್ನು ಪ್ರತ್ಯೇಕ ವಾರ್ಡ್​ಗಳಲ್ಲಿಟ್ಟು ತಪಾಸಣೆ ಮಾಡಲಾಗುತ್ತಿದೆ.

ಈಗ ಸಕ್ಕರೆ ನಾಡು ಮಂಡ್ಯಕ್ಕೂ ಕರೊನಾ ಭೀತಿ ಎದುರಾಗಿದೆ. 47 ವರ್ಷದ ಮಹಿಳೆಯೋರ್ವರಲ್ಲಿ ಶಂಕಿತ ಸೋಂಕು ಕಾಣಿಸಿಕೊಂಡಿದ್ದು ಅವರನ್ನು ಮಿಮ್ಸ್​ಗೆ ದಾಖಲಿಸಲಾಗಿದೆ.

ಈ ಮಹಿಳೆ ನಾಗಮಂಗಲದವರಾಗಿದ್ದು ಹಜ್​ ಯಾತ್ರೆಗೆ ತೆರಳಿದ್ದರು. ಅಲ್ಲದೆ, ಕಲಬುರಗಿಯಲ್ಲಿ ಕರೊನಾ ಸೋಂಕು ತಗುಲಿ ಮೃತಪಟ್ಟ ವೃದ್ಧ ಪ್ರಯಾಣ ಮಾಡಿದ್ದ ವಿಮಾನದಲ್ಲೇ ಇವರೂ ಪ್ರಯಾಣಿಸಿದ್ದರು. ಹಜ್​ ಯಾತ್ರೆಯಿಂದ ಮಾ.1ರಂದು ವಾಪಸ್​ ಬಂದ ನಂತರ ಅವರಲ್ಲಿ ಸಾಮಾನ್ಯ ಜ್ವರ, ಶೀತ ಕಾಣಿಸಿಕೊಂಡಿತ್ತು. ದಿನ ಕಳೆದಂತೆ ಕಾಯಿಲೆ ಗಂಭೀರವಾಗುತ್ತ ಹೋದ ಪರಿಣಾಮ ಮಿಮ್ಸ್​ಗೆ​  ದಾಖಲು ಮಾಡಲಾಗಿದೆ. ಪ್ರತ್ಯೇಕ ವಾರ್ಡ್​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.