ಕರೊನಾ ಸೋಂಕಿತನೋರ್ವ ಕ್ವಾರಂಟೈನ್ ಸೆಂಟರ್ನ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ನಗರದ ಕಲ್ಯಾಣ್ನಲ್ಲಿರುವ ಟಾಟಾ ಆಮಂತ್ರಣ್ ಕ್ವಾರಂಟೈನ್ ಕೇಂದ್ರದಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಗೆ ಕೊವಿಡ್-19 ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ, ಇಲ್ಲಿನ ಕೇಂದ್ರದ ಫ್ಲಾಟ್ ನಂ.917ರಲ್ಲಿ ಐಸೋಲೇಶನ್ನಲ್ಲಿ ಇಡಲಾಗಿತ್ತು.
ಇಂದು ಸಂಜೆ 4.30ರಹೊತ್ತಿಗೆ ಸೋಂಕಿತ ತಾನಿದ್ದ ಮಹಡಿಯ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಡೊಂಬಿವ್ಲಿ ನಿವಾಸಿ ಎನ್ನಲಾಗಿದೆ.
ಸೋಂಕಿಗೆ ಹೆದರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)