ನ್ಯೂಸ್

ಕುಡುಕರ ನಿಯಂತ್ರಿಸುವುದೇ ಕಷ್ಟವಾಗಿದೆ; ಒಂದಾದ ಮೇಲೆ ಒಂದು ಬಾರ್​​ನಲ್ಲಿ ನಡೆಯುತ್ತಿದೆ ಕಳ್ಳತನ..ಗೋಡೆಯನ್ನೇ ಕೊರೆಯುತ್ತಿದ್ದಾರೆ..!

ತುಮಕೂರು: ಎಷ್ಟೇ ಕಾದರೂ ಬಾರ್​ಗಳು ಓಪನ್ ಆಗುತ್ತಿಲ್ಲ. ಮದ್ಯಪ್ರಿಯರಿಗೆ ಇದು ತೀವ್ರ ಬೇಸರ ಮೂಡಿಸಿದೆ. ಕುಡಿಯುವ ಆಸೆಯನ್ನು ತಡೆಯಲಾಗದ ಕೆಲವರು ಬಾರ್​ಗಳಿಗೆ ಕನ್ನಹಾಕುತ್ತಿದ್ದಾರೆ.

ಈಗಾಗಲೇ ಅನೇಕ ಕಡೆಗಳಿಂದ ಬಾರ್​ ಬಾಗಿಲು ಒಡೆದು, ಮದ್ಯ ಕಳವು ಮಾಡಿದ್ದರ ವರದಿಯಾಗಿದೆ. ಇದೀಗ ತುಮಕೂರು ಮತ್ತು ದಾವಣಗೆರೆಯಲ್ಲೂ ಭರ್ಜರಿ ಮೌಲ್ಯದ ಮದ್ಯ ಕಳವಾಗಿದೆ.

ತುಮಕೂರಿನ ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾಮದಲ್ಲಿ ಎಂಎಸ್​​ಐಎಲ್​ ಬಾರ್​​ನಲ್ಲಿ ಕಳ್ಳತನವಾಗಿದೆ. ಶೆಟರ್​ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಮಧ್ಯವನ್ನು ಎಗರಿಸಿದ್ದಾರೆ. ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಗೇ ದಾವಣಗೆರೆಯಲ್ಲೂ ಕೂಡ ಸುಮಾರು 70 ಸಾವಿರ ರೂ.ಮೌಲ್ಯದ ಮದ್ಯ ಕಳವಾಗಿದೆ. ಹೊಸಕೆರೆ ಗ್ರಾಮದ ಸತ್ಯಮ್ಮ ಬಾರ್​ ಆ್ಯಂಡ್​ ರೆಸ್ಟೋರೆಂಟ್​ನಲ್ಲಿದ್ದ 180 ಎಂಎಲ್‌‌ನ 48 ಬಾಟಲ್‌ಗಳ 29 ಬಾಕ್ಸ್, 12 ಬಾಕ್ಸ್ ಬೀಯರ್​​​ನ್ನು ಕುಡುಕರು ಎಗರಿಸಿದ್ದಾರೆ.
ಬಾರ್​ ಕಟ್ಟಡದ ಗೋಡೆ ಕೊರೆದು ಮದ್ಯವನ್ನು ಕಳವು ಮಾಡಲಾಗಿದೆ. ಈ ಬಾರ್​ ಆ್ಯಂಡ್​ ರೆಸ್ಟೋರೆಮಟ್ ಮಹದವೇಪ್ಪ ಎಂಬುವರಿಗೆ ಸೇರಿದ್ದು. ಕರೊನಾ ಹಿನ್ನೆಲೆಯಲ್ಲಿ 15 ದಿನಗಳಿಂದ ಲಾಕ್​ಡೌನ್​ ಆಗಿತ್ತು. ಆದರೆ ಮಂಗಳವಾರ ರಾತ್ರಿ ಕಳವು ಆಗಿದೆ.

ಘಟನಾ ಸ್ಥಳಕ್ಕೆ ಪಿಎಸ್​ಐ ಉಮೇಶ್​ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)