ರಾಯಚೂರು: ಮಾರ್ಚ್ 24ರಿಂದ ಲಾಕ್ಡೌನ್ ಘೋಷಣೆಯಾಗಿದ್ದರೂ ಜನರು ಓಡಾಟವನ್ನು ಬಿಟ್ಟಿಲ್ಲ. ಅಗತ್ಯ ಕೆಲಸವಿದೆ ಎಂದು ಹೋಗುವವರು ಒಂದೆಡೆಯಾದರೆ, ಇನ್ನೊಂದಷ್ಟು ಮಂದಿ ಸುಮ್ಮನೆ ಬೈಕ್ನಲ್ಲಿ ತಿರುಗಾಡುತ್ತಿದ್ದಾರೆ. ಅಂಥವರ ಮೇಲೆ ಪೊಲೀಸರು ಲಾಠಿಚಾರ್ಜ್ ಕೂಡ ಮಾಡುತ್ತಿದ್ದಾರೆ.
ಇಂದು ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಕೂಡ ಹಲವರು ರಸ್ತೆಗಿಳಿದಿದ್ದರು. ಅವರಿಗೆಲ್ಲ ಕರ್ತವ್ಯ ನಿರತ ಪೊಲೀಸರು ಲಾಠಿ ಬೀಸಿ, ವಾರ್ನ್ ಮಾಡಿ ಮನೆಗೆ ಕಳಿಸಿದ್ದಾರೆ. ಅವರೂ ಕೂಡ ವಿವಿಧ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಆದರೆ ಬೈಕ್ನಲ್ಲಿ ಬಂದ ಯುವಕನೋರ್ವನನ್ನು ಅಡ್ಡಗಟ್ಟಿ, ಎಲ್ಲಿಗೆ ಹೋಗಿದ್ದೆ, ಯಾಕೆ ತಿರುಗುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಆತ ಖಾಲಿ ಚೊಂಬು ತೋರಿಸಿ, ಬಯಲು ಬಹಿರ್ದೆಸೆಗೆ ಹೋಗಿದ್ದೆ ಎಂದು ಉತ್ತರಿಸಿದ್ದಾನೆ. ಆದರೂ ಬಿಡದೆ, ಆತನಿಗೂ ಲಾಠಿ ರುಚಿ ತೋರಿಸಿ ಕಳಿಸಿದ್ದಾರೆ.(ಏಜೆನ್ಸೀಸ್)