ನ್ಯೂಸ್

ಬಟ್ಲರ್ ವಿಶ್ವಕಪ್ ಜೆರ್ಸಿ 60 ಲಕ್ಷ ರೂ.ಗೆ ಹರಾಜು

ಲಂಡನ್: ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಜೋಸ್ ಬಟ್ಲರ್ 2019ರ ವಿಶ್ವಕಪ್ ಫೈನಲ್ ಗೆಲುವಿನ ವೇಳೆ ಧರಿಸಿದ್ದ ಜೆರ್ಸಿಯ ಹರಾಜಿನಿಂದ 60 ಲಕ್ಷ ರೂ. (65 ಸಾವಿರ ಪೌಂಡ್) ಗಳಿಸಿದ್ದು, ಇದನ್ನು ಕೋವಿಡ್-19ರ ವಿರುದ್ಧದ ಹೋರಾಟಕ್ಕೆ ಆಸ್ಪತ್ರೆಗಳಿಗೆ ದೇಣಿಗೆಯಾಗಿ ನೀಡಲಿದ್ದಾರೆ.

ಜೆರ್ಸಿಗೆ ಬಿಡ್ ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದ್ದು, ಒಟ್ಟು 82 ಬಿಡ್​ಗಳು ಬಂದಿದ್ದವು. ‘ನನಗಿದು ವಿಶೇಷ ಶರ್ಟ್ ಆಗಿದೆ. ಆದರೆ ಈಗಿನ ತುರ್ತು ಸ್ಥಿತಿಯಲ್ಲಿ ನಾನು ಇದರಿಂದ ಯಾರಿಗಾದರೂ ಸಹಾಯ ಮಾಡಿದರೆ ಇದಕ್ಕೆ ಇನ್ನಷ್ಟು ವಿಶೇಷತೆ ಬರುತ್ತದೆ’ ಎಂದು ಬಟ್ಲರ್ ಹೇಳಿದ್ದಾರೆ.