ನ್ಯೂಸ್

ಬಲವಂತವಾಗಿ ಸೋಂಕು ನಿವಾರಕ ಕುಡಿಸಿದ ದುರುಳರು

ರಾಂಪುರ: ಕರೊನಾ ವೈರಸ್ ಸೋಂಕು ನಿವಾರಣೆಗೆಂದು ಸಿಂಪಡಿಸುತ್ತಿದ್ದ ರಾಸಾಯನಿಕ ತಮ್ಮ ಮೇಲೆ ಬಿತ್ತೆಂದು ಕುಪಿತರಾದ ಗುಂಪು, ದ್ರಾವಣ ಸಿಂಪಡಿಸುತ್ತಿದ್ದ ಕಾರ್ವಿುಕನ ಮೇಲೆ ನಡೆಸಿದೆ ಮತ್ತು ಆ ದ್ರಾವಣವನ್ನು ಬಲವಂತವಾಗಿ ಕುಡಿಸಿದೆ. ಇದರಿಂದ ಕಾರ್ವಿುಕ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮೋಟಿಪುರ ಹಳ್ಳಿಯಲ್ಲಿ ಕುನ್ವಾರ್ ಪಾಲ್ ಏಪ್ರಿಲ್ 14ರಂದು ಸೋಂಕು ನಿವಾರಕ ಸಿಂಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ಇಂದ್ರಪಾಲ್ ಎಂಬುವರ ಕಾಲಿನ ಮೇಲೆ ರೋಗನಿರೋಧಕ ಬಿತ್ತು. ಇದರಿಂದ ಕುಪಿತಗೊಂಡ ಇಂದ್ರಪಾಲ್ ತನ್ನ ಗೆಳೆಯರೊಂದಿಗೆ ಕಾರ್ವಿುಕನ ಮೇಲೆ ಹಲ್ಲೆ ನಡೆಸಿ, ಸಿಟ್ಟಿನಿಂದ ಸೋಂಕು ನಿವಾರಕವನ್ನು ಯುವಕನ ಬಾಯಿಗೆ ಸಿಂಪಡಿಸಿದ್ದ. ಅಸ್ವಸ್ಥನಾದ ಕಾರ್ವಿುಕನನ್ನು ಸ್ಥಳೀಯ ದವಾಖಾನೆಯಿಂದ ಮೊರದಾಬಾದ್​ನ ಆಸ್ಪತ್ರೆಗೆ ಸ್ಥಳಾಂತರಿಸಲಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಎರಡು ದಿನದ ಹಿಂದೆ ಮೃತನಾಗಿದ್ದಾನೆ.

ಇಂದ್ರಪಾಲ್ ಹಾಗೂ ಆತನ ಐವರು ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.