ನ್ಯೂಸ್

ರಸ್ತೆಯಲ್ಲೊಬ್ಬ ವ್ಯಕ್ತಿ ಅನಾರೋಗ್ಯದಿಂದ ಬಿದ್ದು ನರಳಾಡುತ್ತಿದ್ದರೂ ತಿರುಗಿ ನೋಡದ ಜನ...ಆಂಬುಲೆನ್ಸ್​ ಸಂಚರಿಸುತ್ತಿದ್ದರೂ ಕರೆಯಲಿಲ್ಲ...

ಬಳ್ಳಾರಿ: ಇಲ್ಲೋರ್ವ ಅನಾರೋಗ್ಯದಿಂದ ಸುಸ್ತಾಗಿ ಬಿದ್ದು ಗಾಯಗೊಂಡಿದ್ದರೂ ಜನರು ಆತನ ಕಡೆ ತಿರುಗಿ ನೋಡಲಿಲ್ಲ. ಇದಕ್ಕೆ ಕಾರಣ ಕರೊನಾ ವೈರಸ್.

ಆ ವ್ಯಕ್ತಿಯೇನೋ ಕರೊನಾ ಸೋಂಕಿತನಲ್ಲ. ಆದರೆ ಬೇರೇನೋ ಆರೋಗ್ಯ ಸಮಸ್ಯೆಯಿಂದ ಬಿದ್ದು ನರಳುತ್ತಿದ್ದರು. ಆದರೆ ಆತನಿಗೆ ಕರೊನಾ ಇರಬಹುದು ಎಂದು ಭಾವಿಸಿದ ಜನರು ಅವನೆಡೆಗೆ ತಿರುಗಿ ಕೂಡ ನೋಡಲಿಲ್ಲ. ಅದೇ ರಸ್ತೆಯಲ್ಲಿ ಆ್ಯಂಬುಲೆನ್ಸ್​ ಓಡಾಡುತ್ತಿದ್ದರೂ ಕರೆದು ಮಾಹಿತಿ ನೀಡಲಿಲ್ಲ.

ಇಂಥದ್ದೊಂದು ಅಮಾನವೀಯ ಘಟನೆ ನಡೆದಿದ್ದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ. ಒಂದು ದಿನ ಆ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲೇ ಬಿದ್ದು ಹೊರಳಾಡಿದ್ದಾರೆ.

ಬಳಿಕ ವಿಷಯ ತಿಳಿದ ತಹಸೀಲ್ದಾರ್​ ಆಶಪ್ಪ ಪೂಜಾರಿ, ವ್ಯಕ್ತಿಯನ್ನು ಎತ್ತಿ ಆಟೋಕ್ಕೆ ಹಾಕಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)