ಕರೊನಾ ವೈರಸ್ನ ಕೇಂದ್ರ ಬಿಂದು ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ಎರಡೂವರೆ ತಿಂಗಳ ಬಳಿಕ ಮತ್ತೆ ಚಟುವಟಿಕೆ ಆರಂಭವಾಗಿದೆ.
ಜನವರಿ ಕಡೆಯ ವಾರದಲ್ಲಿ ವುಹಾನ್ ನಗರದಲ್ಲಿ ಘೋಷಿಸಲಾಗಿದ್ದ ಲಾಕ್ಡೌನ್ ತೆರವುಗೊಳಿಸಲಾಗಿದ್ದು, ಆರ್ಥಿಕ ಚಟುವಟಿಕೆ ಮತ್ತೆ ಆರಂಭಗೊಂಡಿರುವುದರಿಂದ ಅಲ್ಲಿನ 1.1 ಕೋಟಿ ಜನರು ಈಗ ತುಸು ನಿರಾಳರಾಗಿದ್ದಾರೆ.
ಲಾಕ್ಡೌನ್ ತೆರವುಗೊಂಡಿದ್ದರೂ ಕೆಲವು ನಿರ್ಬಂಧಗಳು ಮುಂದುವರಿದಿವೆ. ಶಾಲಾ- ಕಾಲೇಜುಗಳು ಬಂದ್ ಆಗಿವೆ. ಸಂಚಾರದ ಮಿತಿ ಮುಂದುವರಿದಿದೆ. ಸಾರ್ವಜನಿಕ ಸಾರಿಗೆ ಆರಂಭಗೊಂಡಿದ್ದರೂ ಜನರ ಸಂಚಾರ ಕಡಿಮೆ ಇದೆ.