ನ್ಯೂಸ್

ರಾಷ್ಟ್ರರಾಜಧಾನಿಯಲ್ಲಿ ಲಕ್ಷ ದಾಟಿದ ಕರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣದಲ್ಲೂ ಭರ್ಜರಿ ಏರಿಕೆ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಕರೊನಾ ಸೋಂಕಿನ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಅಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿದಾಟಿದೆ.

ಇಂದು ಒಂದೇ ದಿನ 1379 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,00,823ಕ್ಕೆ ಏರಿದೆ. ಮೃತರ ಒಟ್ಟು ಸಂಖ್ಯೆ 3115 ಆಗಿದೆ.

ದೆಹಲಿಯಲ್ಲಿ ಕರೊನಾ ಟೆಸ್ಟ್​, ಚಿಕಿತ್ಸೆಗಾಗಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಪ್ಲಾಸ್ಮಾ ಬ್ಯಾಂಕ್​ಗಳನ್ನು ತೆರೆಯಲಾಗಿದ್ದು, ಕರೊನಾದಿಂದ ಚೇತರಿಸಿಕೊಂಡವರು ಪ್ಲಾಸ್ಮಾ ದಾನ ಮಾಡಿ ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಮನವಿ ಮಾಡಿದ್ದಾರೆ.

ಹಾಗೇ ಮನೆಮನೆಗೆ ತೆರಳಿ ಕೊವಿಡ್​-19 ಸಮೀಕ್ಷೆ ನಡೆಸಲಾಗುತ್ತಿದೆ. ಹೆಲ್ಪ್​ಲೈನ್​ಗಳನ್ನು ತೆರೆಯಲಾಗಿದೆ. ದೆಹಲಿಯಲ್ಲಿ ಕರೊನಾದಿಂದ ಗುಣಮುಖರಾಗುತ್ತಿರುವವರ ಪ್ರಮಾಣವೂ ಶೇ.70ಕ್ಕೆ ಏರಿದ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ.(ಏಜೆನ್ಸೀಸ್​)