ನ್ಯೂಸ್

ಕರೊನಾ ವೈರಸ್​ ಸೋಂಕು ತಡೆಯಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಣ್ಣು ಸುರಿದ ಗ್ರಾಮಸ್ಥರು

kumarvrl

ಕಲಬುರಗಿ : ಕರೊನಾ ವೈರಸ್​ ಭೀತಿಗೆ ಒಳಗಾಗಿರುವ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮಸ್ಥರು ಎಲ್ಲ ಸಂಪರ್ಕಗಳನ್ನು ಕಡಿದುಕೊಂಡು ಗ್ರಾಮದಲ್ಲೇ ಉಳಿದಿದ್ದಾರೆ.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ರಸ್ತೆಗಳ ಮೇಲೆ ಕಲ್ಲು ಹಾಗೂ ಮಣ್ಣು ಸುರಿದು ವಾಹನಗಳು ಪ್ರವೇಶಿದಂತೆ ತಡೆದಿದ್ದಾರೆ.

ಗ್ರಾಮಸ್ಥರು ಊರು ಬಿಟ್ಟು ಹೊರ ಹೋಗುವಂತಿಲ್ಲ. ಹೊರಗಿನವರು ಗ್ರಾಮ ಪ್ರವೇಶಿಸುವಂತಿಲ್ಲ ಎಂದು ಮುಖಂಡರು ಸೂಚಿಸಿದ್ದಾರೆ. ಹೀಗಾಗಿ ಎಲ್ಲ ಸಂಪರ್ಕ ಕಳಚಿಕೊಂಡು 21 ದಿನ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.
ಕಲಬುರಗಿ ಜಿಲ್ಲೆ ಅಪಾಯಕಾರಿ ವಲಯದಲ್ಲಿ ಇರುವುದರಿಂದ ಜನರು ಮನೆಯಲ್ಲೇ ಇರುವಂತೆ ಎಚ್ಚರಿಕೆ ನೀಡಿದೆ. ಹೀಗಾಗಿ ಗ್ರಾಮಸ್ಥರು ಕೂಡ ಇದಕ್ಕೆ ಜೋಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)