ನ್ಯೂಸ್

VIDEO| ಲಾಕ್​ ಡೌನ್​ನಿಂದ ತೊಂದರೆಯಾದವರಿಗೆ ಘೋಷಿಸಿರುವ ವಿಶೇಷ ಪ್ಯಾಕೇಜ್​ ಅರ್ಹರನ್ನು ತಲುಪಲಿದೆಯೇ?

kumarvrl

ಬೆಂಗಳೂರು: ಲಾಕ್​ ಡೌನ್​ನಿಂದ ತೊಂದಯಾಗಿರುವವರಿಗೆ ಸಿಎಂ ಬಿ.ಎಸ್​.ಯಡಿಯೂರಪ್ಙ ಅವರು ಘೋಷಿಸಿರುವ ಪ್ಯಾಕೇಜ್​ ಅರ್ಹರನ್ನು ತಪುಪುವುದಿಲ್ಲ ಎಂದು ಮಾಜಿ ಸಿ.ಎಂ.ಎಚ್​.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ನೆರೆ ಹಾವಳಿ ಸಂದರ್ಭದಲ್ಲಿ ಮನೆ ಹಾನಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಡ್ತಿವಿ ಎಂದು ಘೋಷಣೆ ಮಾಡಿದ್ರು. ಫಲಾನುಭವಿಗಳಿಗೆ 5 ಲಕ್ಷ ರೂಪಾಯಿ ದೊರೆತಿದೆಯೇ? ಅದೇ ರೀತಿ ಕರೊನಾ ಪ್ಯಾಕೇಜ್​ ಕೂಡ ಆಗುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.

ನಾನು ರೈತರ ಸಾಲಮನ್ನಾ ಘೋಷಣೆ ಮಾಡಿದಾಗ ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿಯ ಹಲವರು ಆರೋಪ ಮಾಡಿದ್ದರು. ಆದರೆ ನಾನು ಅರ್ಹ ರೈತರು ಸಲ್ಲಿಸಿರುವ ಅರ್ಜಿ, ಅದಕ್ಕೆ ನೀಡಿದ್ದ ದಾಖಲೆಗಳನ್ನು ಆ್ಯಪ್​ನಲ್ಲಿ ಸಿಗುವಂತೆ ಪಾರದರ್ಶಕವಾಗಿ ಸಿಗುವಂತೆ ಮಾಡಿದ್ದೆ. ಬಿಜೆಪಿ ಸರ್ಕಾರ ಕೂಡ ಕರೊನಾ ಪ್ಯಾಕೇಜ್​ನ ಸ್ಥಿತಿಗತಿಯನ್ನು ಪಾರದರ್ಶಕವಾಗಿ ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ದೇವರ ದಯೆಯಿಂದ ಕರೊನಾ ನಮ್ಮ ದೇಶದಲ್ಲಿ ಕರೊನಾ ವೈರಸ್​ ಹೆಚ್ಚು ಪರಿಣಾಮ ಬೀರಿಲ್ಲ. ಆದರೆ ಸರ್ಕಾರ ಕರೊನಾ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.