ನ್ಯೂಸ್

ಕರೊನಾ ಭಯೋತ್ಪಾದನೆ? ಭಾರತದಲ್ಲಿ ವೈರಸ್ ಹರಡುವ ಪ್ಲಾನ್​

ನವದೆಹಲಿ: ಭಾರತದಾದ್ಯಂತ ಕರೊನಾ ಸೋಂಕು ಹಬ್ಬಿಸಲು ಪಾಕಿಸ್ತಾನ ಸಂಚು ರೂಪಿಸುತ್ತಿರುವ ಗುಮಾನಿ ನಿಜವಾಗಿದೆ. ಐದರಿಂದ ಆರು ಜನ ಪಾಕಿಸ್ತಾನಿಯರನ್ನೊಳಗೊಂಡ 40 - 50 ಮಂದಿಯ ತಂಡ ನೇಪಾಳ ಗಡಿ ಮೂಲಕ ಬಿಹಾರ ಮಾರ್ಗವಾಗಿ ಭಾರತ ಪ್ರವೇಶಿಸಿ ಕರೊನಾ ಸೋಂಕು ಹಬ್ಬಿಸಲು ಸಂಚು ರೂಪಿಸಿರುವ ಆತಂಕಕಾರಿ ಸಂಗತಿಯನ್ನು ಸಶಸ್ತ್ರ ಸೀಮಾ ಬಲ್ (ಎಸ್​ಎಸ್​ಬಿ) ಬಯಲಿಗೆಳೆದಿದೆ. ಭಾರತ-ನೇಪಾಳ ಗಡಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹಾಗೂ ಕಳ್ಳಸಾಗಣೆಯಲ್ಲಿ ಸಕ್ರಿಯನಾಗಿರುವ ಜಲೀಮ್ ಮುಖಿಯಾ ಎಂಬಾತನೇ ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿರುವುದಾಗಿ ಬೆತೆô ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಂದನ್ ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಈ ಮಾಹಿತಿ ನೀಡಿದ್ದಾರೆ.

ಸಂಚೇನು?: ಪಾಕಿಸ್ತಾನದ ಐವರು ಸೇರಿ ವಿವಿಧ ಮುಸ್ಲಿಂ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 200ಕ್ಕೂ ಮಂದಿ ಈಗಾಗಲೇ ನೇಪಾಳದ ವಿವಿಧ ಮಸೀದಿ/ಮದರಸಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನೂ ಕೆಲವರು ಕೆಲವೇ ದಿನಗಳಲ್ಲಿ ಇವರನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ. ಇವರೆಲ್ಲರೂ ಭಾರತ ಪ್ರವೇಶಿಸಿ ಕರೊನಾ ವೈರಸ್ ಹರಡಿಸುವ ಸಂಚು ರೂಪಿಸಿರುವುದಾಗಿ ತಿಳಿದು ಬಂದಿದೆ.

ನೇಪಾಳದಿಂದ ತಂಡವೊಂದು ಭಾರತ ಪ್ರವೇಶಿಸಲು ಸಂಚು ರೂಪಿಸಿರುವ ಬಗ್ಗೆ ಎಸ್​ಎಸ್​ಬಿ ಮಾಹಿತಿ ನೀಡಿದೆ. ಈ ವಿಚಾರವನ್ನು ಕೇಂದ್ರ ಗೃಹ ಸಚಿವಾಲಯದ ಗಮನಕ್ಕೂ ತರಲಾಗಿದೆ. | ಅಮಿತ್ ಸುಭಾನಿ, ಬಿಹಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ