ನ್ಯೂಸ್

ಬೆಂಗಳೂರು ಪೊಲೀಸ್​ ಪೇದೆಯಲ್ಲಿ ಕರೊನಾ ಪಾಸಿಟಿವ್; ಆತಂಕದಲ್ಲಿ ಆರಕ್ಷಕರು..

ಬೆಂಗಳೂರು: ನಗರದ ಪೊಲೀಸ್ ಪೇದೆಯೋರ್ವರಿಗೆ ಕರೊನಾ ಸೋಂಕು ತಗುಲಿದೆ. ಈ ಪೊಲೀಸ್ ಪೇದೆ ಏಪ್ರಿಲ್​ 14ರಿಂದ ಕರ್ತವ್ಯಕ್ಕೆ ಹೋಗಿರಲಿಲ್ಲ. ಕಾಲಿಗೆ ಗಾಯ ಆಗಿದ್ದರಿಂದ ರಜೆಯಲ್ಲಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿದ್ದು ಗಾಯಮಾಡಿಕೊಂಡಿದ್ದ ಪೇದೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ.

ಪೊಲೀಸ್​ ಪೇದೆ 14ರಿಂದ ರಜೆಯಲ್ಲಿ ಇದ್ದರೂ ಅವರಲ್ಲೀಗ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದ್ದರಿಂದ ಸಹಜವಾಗಿ ಪೊಲೀಸ್​ ಇಲಾಖೆಯಲ್ಲಿ ಆತಂಕ ಶುರುವಾಗಿದೆ. ಅವರ ಟ್ರಾವೆಲ್​ ಹಿಸ್ಟರಿ, ಯಾರ ಸಂಪರ್ಕಕ್ಕೆ ಹೋಗಿದ್ದರು ಎಂಬಿತ್ಯಾದಿ ವಿವರಗಳನ್ನು ಪೇದೆಯಿಂದಲೇ ತಿಳಿದುಕೊಳ್ಳಲಾಗುವುದು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದರು.

ಹಾಗೇ ಯಾರಾದರೂ ಸಿಬ್ಬಂದಿ ಅವರ ಸಂಪರ್ಕಕ್ಕೆ ಹೋಗಿದ್ದರೆ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)