Dr K Sudhakar, Medical Education Minister addressing press regarding Arogya Sethu App and Covid-19 lockdown, Coronavirus at Vidhana Soudha in Bengaluru on Thursday, 21 May 2020. Photo by S K Dinesh 
ನ್ಯೂಸ್

ಸಚಿವ ಸುಧಾಕರ್​ ಆಪ್ತಸಹಾಯಕನಿಗೆ ಕರೊನಾ ಪಾಸಿಟಿವ್​

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್​ ಅವರ ಆಪ್ತಸಹಾಯಕರೊಬ್ಬರಿಗೆ ಕರೊನಾ ಪಾಸಿಟಿವ್​ ದೃಢಪಟ್ಟಿದೆ.

ಈಗಾಗಲೇ ವಿಧಾನಸೌಧದ ಸುಧಾಕರ್ ಅವರ ಕಚೇರಿ 339 ಕೊಠಡಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಆಪ್ತ ಸಿಬ್ಬಂದಿ ಶಾಖೆ ಇದ್ದ 339-ಎ ಕೊಠಡಿಯನ್ನೂ ಸೀಲ್‍ಡೌನ್ ಮಾಡಲಾಗಿದೆ.

ಸಚಿವರ ಆಪ್ತ ಸಹಾಯಕರಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಸುಧಾಕರ್​ಗೂ ಕರೊನಾ ಭೀತಿ ಆವರಿಸಿದೆ ಎಂಬ ಸುದ್ದಿ ಹಬ್ಬಿತ್ತು. ಈ ಸಂಬಂಧ ಟ್ವೀಟ್​ ಮಾಡಿರುವ ಸಚಿವರು, ''ಆಪ್ತ ಸಹಾಯಕನಿಗೆ ಕರೊನಾ ಸೋಂಕು ತಗುಲಿದ್ದು ಮತ್ತೊಮ್ಮೆ ನಾನು ಕ್ವಾರಂಟೈನ್ ಆಗಬೇಕಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಗಮನಿಸಿದ್ದೇನೆ. ನಾನು ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ಹೀಗಾಗಿ ಕ್ವಾರಂಟೈನ್ ಆಗುವ ಅಗತ್ಯವಿಲ್ಲ'' ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಸಚಿವ ಸುಧಾಕರ್​ರ ತಂದೆ, ಮತ್ನಿ, ಮಗಳಿಗೂ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಆ ವೇಳೆ ಸಚಿವರು ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದರು.