ಬೆಂಗಳೂರು: ರಾಜ್ಯದಲ್ಲಿ ಗುರುವಾರ ಹೊಸದಾಗಿ 8,477 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಇದುವರೆಗಿನ ಸಂಖ್ಯೆ 7,43,848ಕ್ಕೆ ತಲುಪಿದೆ.
ಮತ್ತೊಂದೆಡೆ ಗುಣಮುಖರಾಗಿರುವವರ ಪೈಕಿ 8,841 ಮಂದಿ ಗುರುವಾರ ಬಿಡುಗಡೆ ಆಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಇದುವರೆಗೆ ಕರೊನಾ ಸೋಂಕಿನಿಂದ ಚೇತರಿಸಿಕೊಂಡು ಗುಣವಾಗಿರುವವರ ಪ್ರಮಾಣ 6,20,008ಕ್ಕೆ ಏರಿಕೆಯಾಗಿದೆ.
ಅದಾಗ್ಯೂ ರಾಜ್ಯದಲ್ಲಿ 1,13,538 ಸಕ್ರಿಯ ಪ್ರಕರಣಗಳಿದ್ದು, ಅವರಲ್ಲಿ ಗಂಭೀರ ಸಮಸ್ಯೆಗಳಿಂದಾಗಿ 939 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ 85 ಮಂದಿ ಕರೊನಾಗೆ ಬಲಿಯಾಗಿದ್ದು, ಈ ವರೆಗೆ ಕೋವಿಡ್-19ನಿಂದಾಗಿ ಮೃತಪಟ್ಟವರ ಸಂಖ್ಯೆ 10,283ಕ್ಕೆ ತಲುಪಿದೆ.