ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 11.30ರ ಸುಮಾರಿನಲ್ಲಿ ಕರೊನಾ ಸೋಂಕಿತನೊಬ್ಬ ಸೆಕ್ಯೂರಿಟಿಗಳಿಗೆ ಉಗಿದು ಎಸ್ಕೇಪ್ ಆಗಿದ್ದಾನೆ. ಸಿಬ್ಬಂದಿ ಬೆನ್ನಟ್ಟಿದರೂ ತಪ್ಪಿಸಿಕೊಂಡು ಓಡಿಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪರಾರಿಯಾದ ಸೋಂಕಿತ ವ್ಯಕ್ತಿಯು ಬ್ಯ್ಲಾಕ್ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದ. ಈತನ ಮುಖಚಹರೆಯುಳ್ಳ ವ್ಯಕ್ತಿ ಕಂಡು ಬಂದಲ್ಲಿ ಜನರು ಸಮೀಪದ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಎಸ್ಕೇಪ್ ಆಗಿರುವ ಸೋಂಕಿತನ ಪತ್ತೆಗೆ ಸಹಕರಿಸಬೇಕು. ಅಲ್ಲದೆ ಮುಂದಾಗುವ ಅನಾಹುತ ತಪ್ಪಿಸಬೇಕು. ಇದನ್ನೂ ಓದಿರಿ ಎಚ್ಚರ! ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್, ನಿಮ್ಮ ಬಳಿಯೂ ಆತ ಬರಬಹುದು…
ಆಸ್ಪತ್ರೆಯಿಂದ ಪರಾರಿಯಾದ ವ್ಯಕ್ತಿಯು ಗಲಾಟೆ ಕೇಸ್ನಲ್ಲಿ ಬಂಧಿತನಾಗಿದ್ದ. ಈತನಿಗೆ ನಿನ್ನೆ ಸಂಜೆ(ಮಂಗಳವಾರ) ಕರೊನಾ ಸೋಂಕು ದೃಢಪಟ್ಟಿತ್ತು. ಐಸೋಲೇಷನ್ ವಾರ್ಡ್ನಲ್ಲಿ ಟ್ರೀಟ್ಮೆಂಟ್ ಕೊಡಲಾಗುತಿತ್ತು. ಆದರೆ, ಇಂದು ಏಕಾಏಕಿ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಬೆಂಗಳೂರಿನ ಜನರಿಗೆ ಆತಂಕ ತಂದೊಡ್ಡಿದ್ದಾನೆ. ಈತ ಹೆಚ್ಚು ದೂರ ಕ್ರಮಿಸಿದಷ್ಟೂ ಸೋಂಕಿತರ ಪ್ರಮಾಣವೂ ಹೆಚ್ಚಲಿದೆ.
ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಯಾರಾದರೂ ನೋಡಿದ್ರೆ ಕೂಡಲೇ ಪೊಲೀಸರಿಗೆ ತಿಳಿಸಿ.