ಬಳ್ಳಾರಿ: ಕೋವಿಡ್ ಸೋಂಕಿನ ಭೀತಿಯಲ್ಲಿರುವ ಜನತೆ ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಕುಟುಂಬ ಸದಸ್ಯರ ಕಷ್ಟಕ್ಕೂ ಕೈ ಚಾಚುತ್ತಿಲ್ಲ, ಸಾವು-ನೋವಿನಲ್ಲೂ ಭಾಗಿಯಾಗುತ್ತಿಲ್ಲ... ಎಂಬ ಸಾಕಷ್ಟು ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ಕರೊನಾ ಸೋಂಕಿತ ವೃದ್ಧರೊಬ್ಬರು ಊಟಕ್ಕಾಗಿ ಕಾಡಿ ಬೇಡಿದರೂ ಸಿಗದ ಕಾರಣ ಹಸಿವಿಂದಲೇ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ.
ತಾಲೂಕಿನ ಟಿ.ಬೆಳಗಲ್ಲು ಗ್ರಾಮದಲ್ಲಿ ಚಿಕಿತ್ಸೆ ಮತ್ತು ಆಹಾರ ದೊರಕದೆ ಕರೊನಾ ಸೋಂಕಿತ 60 ವರ್ಷದ ವೃದ್ಧರೊಬ್ಬರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಸಾಯುವ ಕೊನೇಗಳಿಗೆಯಲ್ಲಿ ಪಡಬಾರದ ಕಷ್ಟ ಪಟ್ಟಿದ್ದು, ಮನಕಲಕುವಂತಿದೆ. ಸಹಾಯಕ್ಕೆ ಯಾರೂ ಧಾವಿಸದ ಪರಿಣಾಮ ನರಳುತ್ತಲೇ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿರಿ ಪ್ಲಾಸ್ಮಾ ದಾನ ಮಾಡುತ್ತಿರುವ ದೇಶದ ಮೊದಲ ಶಾಸಕ ಕರ್ನಾಟಕದವರು!
'ಕೊಟ್ಟೂರು ಪಟ್ಟಣದಲ್ಲಿ ಸಮಾರಂಭವೊಂದನ್ನು ಮುಗಿಸಿ, ಬಸ್ ಮೂಲಕ ಬಂದಿದ್ದ ವೃದ್ಧನಿಗೆ ಆ.14ರಂದು ಪರೀಕ್ಷೆ ಮಾಡಿಸಿದಾಗ ಬಳಿಕ ಸೋಂಕು
'ಸಮಯಕ್ಕೆ ಸರಿಯಾಗಿ ಊಟ ಸಿಗದ ಕಾರಣ ವೃದ್ಧನ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಹಾಯಕ್ಕೆ ನೆರೆಯವರನ್ನು ಕರೆದರೂ ಪ್ರಯೋಜನವಾಗಿಲ್ಲ. ಸಂಬಂಧಿಕರೂ ಕರೆಗೆ ಸ್ಪಂದಿಸಿಲ್ಲ. ಕೊನೆಗೆ ಆಹಾರ ಸಿಗದೆ ವೃದ್ಧ ಪ್ರಾಣಬಿಟ್ಟಿದ್ದಾನೆ' ಎಂದು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, 'ವೃದ್ಧನೇ ಹೋಂ ಐಸೋಲೇಷನನಲ್ಲಿ ಇರುವುದಾಗಿ ತಿಳಿಸಿದ್ದರು. ನಂತರ ಉಸಿರಾಟದಲ್ಲಿ ಸಮಸ್ಯೆಯಾಗಿ ಮೃತಪಟ್ಟಿದ್ದಾರೆ. ನಮ್ಮಲ್ಲಿ ಬೆಡ್ಗಳ ಕೊರತೆಯಿಲ್ಲ' ಎಂದು ಸ್ಪಷ್ಟಪಡಿಸಿದರು.
ಡಿಎಚ್ಒ ಡಾ.ಎಚ್.ಎಲ್.ಜನಾರ್ದನ್ ಮಾತನಾಡಿ, 'ವೃದ್ಧನಿಗೆ ಸಕಾಲಕ್ಕೆ ಆಹಾರ ದೊರೆತಿಲ್ಲ. ಕೊನೇಗಳಿಗೆಯಲ್ಲಿ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿದ್ದಾರೆ. ಅವರು ಚಿಕಿತ್ಸೆಗಾಗಿ ವೈದ್ಯರಿಗೆ ಕರೆ ಮಾಡಿರುವ ಕುರಿತಾಗಿ ಅವರ ಮೊಬೈಲ್ ಪರಿಶೀಲಿಸಲಾಗುವುದು' ಎಂದರು.