ಸಹರನ್ಪುರ : ಕರೊನಾ ವೈರಸ್ ಸೋಂಕು ಹರಡುತ್ತಿರುವ ವೇಳೆಯಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಈಗಾಗಲೇ ಕರೊನಾ, ಕೋವಿಡ್-19, ಲಾಕ್ಡೌನ್ ಹೆಸರು ಇಡಲಾಗಿದೆ.
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪುತ್ರನಿಗೆ ಸ್ಯಾನಿಟೈಜರ್ ನಾಮಕರಣ ಮಾಡಿ ಕರೊನಾ ವೈರಸ್ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಉತ್ತರ ಪ್ರದೇಶದ ಸಹರನ್ಪುರದ ಜಿಲ್ಲೆಯ ವಿಜಯ ವಿಹಾರ ಗ್ರಾಮದ ಒಮ್ವೀರ್ ಸಿಂಗ್ ಎಂಬುವವರು ತಮ್ಮ ಪುತ್ರನಿಗೆ ಸ್ಯಾನಿಟೈಜರ್ ಎಂದು ನಾಮಕರಣ ಮಾಡಿದ್ದಾರೆ. ಇದಕ್ಕೆ ಪತ್ನಿ ಕೂಡ ಒಪ್ಪಿಗೆ ನೀಡಿದ್ದಾರೆ.
ಸ್ಯಾನಿಟೈಜರ್ ಕರೊನಾ ವೈರಸ್ ಅನ್ನು ನಾಶಪಡಿಸುತ್ತದೆ. ಸದ್ಯ ವೈರಸ್ ನಾಶ ಮಾಡಲು ಇರುವ ಏಕೈಕ ದಾರಿ ಇದಾಗಿದೆ. ನಾವು ಕರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಪುತ್ರನಿಗೆ ಹೆಸರು ನಾಮಕರಣ ಮಾಡಿದ್ದೇನೆ. ಮಗನ ಈ ಹೆಸರು ನಮಗೆ ಯಾವಾಗಲೂ ಕರೊನಾ ಸೋಂಕು ವಿರುದ್ಧ ಹೋರಾಡಿದ ಅನುಭವವನ್ನು ನೆನಪಿಗೆ ತರುತ್ತದೆ ಎಂದು ಅವರು ಹೇಳಿದರು. (ಏಜೆನ್ಸೀಸ್)