ನ್ಯೂಸ್

ಪೊಲೀಸ್​ ಪೇದೆಗೆ ಕರೊನಾ ಸೋಂಕು: ಕೆಆರ್​ಪೇಟೆಯ 2 ಪೊಲೀಸ್​ ಠಾಣೆಗಳು ಸೀಲ್​ಡೌನ್​

ಮಂಡ್ಯ: ಕೆಆರ್​ಪೇಟೆಯ ಪೊಲೀಸ್​ ಪೇದೆಗೆ ಕರೊನಾ ವೈರಸ್​ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಪಟ್ಟಣದ 2 ಠಾಣೆಗಳನ್ನು ಸೀಲ್​ಡೌನ್​ ಮಾಡಲಾಗಿದೆ.

ಕೆಆರ್​ಪೇಟೆ ಟೌನ್​ ಠಾಣೆಯ ಕ್ರೈಂ ವಿಭಾಗದ ಮುಖ್ಯ ಪೇದೆಗೆ ಸೋಂಕು ಹರಡಿರುವುದು ದೃಢಪಟ್ಟ ನಂತರ ಕೆಆರ್​ಪೇಟೆ ಟೌನ್​ ಹಾಗೂ ಗ್ರಾಮಾಂತರ ಠಾಣೆಗಳಿಗೆ ಸೋಂಕು ನಿವಾರಕ ಸಿಂಪಡಿಸಿ ಸೀಲ್​ಡೌನ್​ ಮಾಡಲಾಗಿದೆ.

ವೈರಸ್​ ಸೋಂಕಿತ ಪೇದೆಯನ್ನು ಮಂಡ್ಯದ ಮಿಮ್ಸ್​ ಆಸ್ಪತ್ರೆಗೆ ಐಸೋಲೇಷನ್​ ವಾರ್ಡ್​ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸೋಂಕಿತ ಪೇದೆ ಟೌನ್ ಠಾಣೆಯ ಮಾಹಿತಿ ಸಂಗ್ರಹಗಾರ.

ಪೇದೆಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇವರ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಎರಡು ಠಾಣೆಗಳ ಬಾಗಿಲು ಮುಚ್ಚಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ದೂರುಗಳನ್ನು ಕಿಕ್ಕೇರಿ ಠಾಣೆಯಲ್ಲಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.