ಚೆನ್ನೈ: ಅಯ್ಯೋ ವಿಧಿಯೇ.. ನೀನೆಷ್ಟು ಕ್ರೂರಿ? ಇಡೀ ಕುಟುಂಬಕ್ಕೆ ಆಧಾರಸ್ತಂಭ ಆಗಿದ್ದ ಯಜಮಾನ ಸತ್ತರೂ ಅವರನ್ನು ಕೊನೇ ಬಾರಿಗೆ ಅಪ್ಪಿಕೊಳ್ಳುವ, ಕಡೇ ಪಕ್ಷ ಮುಟ್ಟೋಕು... ಮುಖವನ್ನಾದರೂ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶವನ್ನೇ ನೀಡದಷ್ಟು ನಿರ್ಧಯಿ ಆಗಿಬಿಟ್ಟೆ ಏಕೆ?
ಇಂತಹದ್ದೊಂದು ಕರುಣಾಜನಕ ದೃಶ್ಯಕ್ಕೆ ಚೆನ್ನೈನ ಕೋವಿಡ್ ಆಸ್ಪತ್ರೆಯೊಂದು ಸಾಕ್ಷಿಯಾಗಿದೆ. ಕರೊನಾ ಸೋಂಕು ಮಣಿಸುವ ಹೋರಾಟದಲ್ಲಿ ಮೂರು ತಿಂಗಳಿಂದ ಕರ್ತವ್ಯ ನಿರ್ವಹಿಸಿದ್ದ ಚೆನ್ನೈನ ಪೊಲೀಸ್ ಅಧಿಕಾರಿಯೊಬ್ಬರು ಕರೊನಾಗೆ ಬಲಿಯಾದರು. ಅವರ ಮೃತದೇಹ ಆಸ್ಪತ್ರೆಯಿಂದ ಹೊರ ತರುತ್ತಿದ್ದಂತೆ ಬಾಗಿಲಲ್ಲೇ ಕಾಯುತ್ತಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿರಿ video/ ಕರೊನಾ ವಾರ್ಡಿನಲ್ಲಿ ‘ನರಕ’ ದರ್ಶನ, ಶೌಚಗೃಹದ ನೀರನ್ನೇ ಕುಡಿದ ಸೋಂಕಿತರು!
ಕೊನೇ ಬಾರಿಗೆ ಅವರನ್ನು ನೋಡಬೇಕು, ಅಪ್ಪಿಕೊಳ್ಳಬೇಕು ಎಂದು ಕುಟುಂಬಸ್ಥರು ಅಂಗಲಾಚುತ್ತಿರುವ ... ಶವ ಮುಟ್ಟಲು ಓಡಿ ಹೋಗುತ್ತಿದ್ದವರನ್ನು ಇತರರು ಎಳೆದುಕೊಳ್ಳುತ್ತಿರುವ... ಅಸಹಾಯಕವಾಗಿ ನಿಂತಿದ್ದ ಸಿಬ್ಬಂದಿ... ಈ ದೃಶ್ಯ ನೋಡುತ್ತಿದ್ದರೆ ಎಂತಹವರ ಕಣ್ಣಲ್ಲಿ ನೀರು ಜಿನುಗದೆ ಇರದು. ಕರೊನಾ ವಾರಿಯರ್ಸ್ ಸಾವಿನ ದೃಶ್ಯ ನೋಡಿದರೆ ಸಾವಿನಲ್ಲೂ ವಿಧಿಯ ಕ್ರೂರತೆಗೆ ಹಿಡಿಶಾಪ ಹಾಕುತ್ತೀರಿ.
ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಕರೊನಾ ಸೋಂಕಿಗೆ ಬಲಿಯಾದ ದೃಶ್ಯ ಕೋವಿಡ್19ನ ಕರಾಳತೆಗೆ ಹಿಡಿದ ಕನ್ನಡಿ. ಕೋವಿಡ್ ನಿಯಮದಂತೆ ಅಂತ್ಯಸಂಸ್ಕಾರ ಮಾಡಲು ಮೃತದೇಹ ಕೊಂಡೊಯ್ಯುವ ವೇಳೆ ಕಂಡು ಬಂದ ಮನಕಲಕುವ ದೃಶ್ಯ ಇಲ್ಲಿದೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ನೋಡಿ