ನ್ಯೂಸ್

ನಾಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯಲ್ಲಿ ಕರೊನಾ; ಸ್ವಲ್ಪದರಲ್ಲೇ ತಪ್ಪಿತು ಎಡವಟ್ಟು

ಕೋಲಾರ: ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಅದೆಷ್ಟೋ ವಿದ್ಯಾರ್ಥಿಗಳು ಆತಂಕದ ಮಧ್ಯೆಯೇ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.

ಈ ಮಧ್ಯೆ ಕೋಲಾರದಲ್ಲಿ ನಾಳೆ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೋರ್ವಳಲ್ಲಿ ಸೋಂಕು ದೃಢಪಟ್ಟಿದ್ದು ಇನ್ನಷ್ಟು ಭಯ ಹುಟ್ಟಿದೆ.

ಕೋಲಾರದ ಕೆಜಿಎಫ್​​ ಬಾಲಮಂದಿರದಲ್ಲಿದ್ದ 10ನೇ ಕ್ಲಾಸ್​ ವಿದ್ಯಾರ್ಥಿನಿಯಲ್ಲಿ ಕರೊನಾ ಕಾಣಿಸಿಕೊಂಡಿದೆ. ಈಕೆ ನಾಳೆ ಪರೀಕ್ಷೆ ಬರೆಯಬೇಕಿತ್ತು.

ಬಾಲ್ಯವಿವಾಹದ ಆರೋಪದ ಪ್ರಕರಣದಡಿ ಆಕೆಯನ್ನು ಬಾಲಮಂದಿರದಲ್ಲಿ ಇಡಲಾಗಿತ್ತು. ನಾಳೆ ಪರೀಕ್ಷೆ ಇರುವ ಸಲುವಾಗಿ ಆಕೆಯ ತಂದೆ ತಾಯಿ ಅವಳನ್ನು ಎರಡು ದಿನಗಳ ಹಿಂದೆ ಮನೆಗೆ ಕರೆದುಕೊಂಡು ಬಂದಿದ್ದರು.

ಆದರೆ ಆಕೆಯಲ್ಲಿ ಈಗ ಕರೊನಾ ಕಾಣಿಸಿಕೊಂಡಿದ್ದರಿಂದ ನಾಳಿನ ಪರೀಕ್ಷೆಗೆ ಅವಕಾಶ ನೀಡುತ್ತಿಲ್ಲ. ಅದರ ಬದಲು ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ಡಿಡಿಪಿಐ‌ ರತ್ನಯ್ಯ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)