ನ್ಯೂಸ್

ರಾಜ್ಯದಲ್ಲಿ ಮತ್ತೆ ಹೆಚ್ಚುತ್ತಿದ್ದಾರೆ ಸೋಂಕಿತರು- ಒಂದೇ ದಿನ 30 ಹೊಸ ಪ್ರಕರಣ ದಾಖಲು! 565ಕ್ಕೇರಿದ ಸೋಂಕಿತರ ಸಂಖ್ಯೆ- 21 ಮಂದಿ ಸಾವು

ಬೆಂಗಳೂರು: ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮತ್ತೆ ಕರೊನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿಯೇ 30 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ 8 ರಿಂದ 15 ವರ್ಷ ಮಕ್ಕಳೂ ಸೇರಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 565ಕ್ಕೆ ಏರಿದೆ. ಈ ಪೈಕಿ 229 ಮಂದಿ ಬಿಡುಗಡೆ ಹೊಂದಿದ್ದಾರೆ, 21 ಮಂದಿ ಮೃತಪಟ್ಟಿದ್ದಾರೆ. ಉಳಿದಿರುವ 314 ಮಂದಿಯಲ್ಲಿ 305 ಸೋಂಕಿತರು ಪ್ರತ್ಯೇಕ ವಾರ್ಡ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 9 ಮಂದಿಯನ್ನು ಐಸಿಯುನಲ್ಲಿ ಇರಿಸಲಾಗಿದೆ.

ಹೊಸ ಸೋಂಕಿತರ ಪೈಕಿ 11 ಮಂದಿ ಬೆಳಗಾವಿ ಜಿಲ್ಲೆಯ ಹೀರೇಬಾಗೇವಾಡಿಯವರಾಗಿದ್ದರೆ, 10 ಮಂದಿ ಬೆಂಗಳೂರು ನಗರಕ್ಕೆ ಸೇರಿದ್ದಾರೆ. ಉಳಿದಂತೆ ಬೆಳಗಾವಿ ಹುಕ್ಕೇರಿಯಲ್ಲಿ 3, ವಿಜಯಪುರದಲ್ಲಿ 2, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ ಹಾಗೂ ಕಲಬುರಗಿಯ ತಲಾ ಒಬ್ಬರು ಸೋಂಕು ಪೀಡಿತರಾಗಿದ್ದಾರೆ.

ನಿಮ್ಮ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ನೋಡಿ ವಿವರ: