ನ್ಯೂಸ್

ಐಜಿಪಿ, ಎಸ್‌ಪಿ ಕಚೇರಿಗೂ ವಕ್ಕರಿಸಿದ ಕರೊನಾ ?

ಮೈಸೂರು: ಈಗಾಗಲೇ ರಾಜ್ಯದಲ್ಲಿ ಇಬ್ಬರು ಪೊಲೀಸರನ್ನು ಬಲಿ ಪಡೆದಿರುವ ಮಹಾಮಾರಿ ಕರೊನಾ ಸೋಂಕು ಐಜಿಪಿ, ಎಸ್‌ಪಿ ಕಚೇರಿಗೂ ತಲ್ಲಣ ಮೂಡಿಸಿದೆ.

ಇಲ್ಲಿನ ದಕ್ಷಿಣ ವಲಯ ಐಜಿಪಿ ವಿಪುಲ್‌ಕುಮಾರ್, ಎಸ್‌ಪಿ ರಿಷ್ಯಂತ್ ಹಾಗೂ ಎಎಸ್‌ಪಿ ಸ್ನೇಹಾ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಎಸ್‌ಪಿ ಕಚೇರಿಯ 18 ಸಿಬ್ಬಂದಿಗೆ ಅಧಿಕಾರಿಗಳು ರಜೆ ಕೊಟ್ಟಿದ್ದಾರೆ.

ನಂಜನಗೂಡು ಗ್ರಾಮಾಂತರ ಠಾಣೆಯ ಪೇದೆಗೆ ಕರೊನಾ ಪಾಸಿಟಿವ್ ಬಂದಿದೆ. ಸೋಂಕಿತರ ಜತೆ ಅಡಿಷನಲ್ ಎಸ್‌ಪಿ ಸ್ನೇಹಾ ಸೇರಿ 22 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಎಸ್​ಪಿ ರಿಷ್ಯಂತ್ ಸೇರಿ 36 ಜನರು ಸೆಕೆಂಡರಿ ಸಂಪರ್ಕದಲ್ಲಿದ್ದರು. ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಕರೊನಾ ಪರೀಕ್ಷೆಗೆ ಕಳಿಸಲಾಗಿದೆ. ಇದನ್ನೂ ಓದಿರಿ ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

ಸೋಂಕಿತರು ಮೈಸೂರು ಎಸ್‌ಪಿ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಎಸ್‌ಪಿ ಹಾಗೂ ಐಜಿಪಿ ಕಚೇರಿ ಒಂದೇ ಕಟ್ಟಡದಲ್ಲಿ ಇರುವ ಕಾರಣ ಇಡೀ ಕಟ್ಟಡವನ್ನು ಮಹಾನಗರ ಪಾಲಿಕೆ ಸ್ಯಾನಿಟೈಸ್ ಮಾಡಿದೆ. ಅಧಿಕಾರಿಗಳು ಸದ್ಯ ಮನೆಯಿಂದಲೇ ಜಿಲ್ಲೆಯ ಕಾನೂನು ಸುವ್ಯವಸ್ಥೆ ಪಾಲಿಸುತ್ತಿದ್ದಾರೆ.

ಸೋಂಕಿತ ಪೇದೆಯು ಟಿ.ನರಸೀಪುರ ಪೊಲೀಸ್ ಠಾಣೆಯ ಬುಲೆಟ್ ನಾಪತ್ತೆ ಪ್ರಕರಣದ ತನಿಖೆಯಲ್ಲಿದ್ದರು. ಬುಲೆಟ್ ಪ್ರಕರಣದ ತನಿಖೆಯಿಂದಾಗಿ ಪೊಲೀಸ್ ಹಿರಿಯ ಅಧಿಕಾರಿಗಳು ಮತ್ತು ಕಿರಿಯ ಅಧಿಕಾರಿಗಳಿಗೆ ಆತಂಕ