ಬಾಗಲಕೋಟೆ: ಮುಧೋಳದ ಪೊಲೀಸ್ ಪೇದೆ, ಜಮಖಂಡಿಯ ಎಸ್ಬಿಐ ಎಟಿಎಂ ಸೆಕ್ಯೂರಿಟಿಗೆ ಕರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎರಡೂ ನಗರಗಳಲ್ಲಿ ಸೀಲ್ಡೌನ್ ಮಾದರಿಯಲ್ಲಿಯೇ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳಿಗೆಲ್ಲ ಬ್ಯಾರಿಕೇಡ್ ಹಾಕಲಾಗಿದೆ. ಪೊಲೀಸರು ಕೆಲವೆಡೆ ಮಣ್ಣು ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಜಮಖಂಡಿಯಲ್ಲಿ 30ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಮುಧೋಳ ನಗರದಲ್ಲೂ ಬಾರೀ ಕಟ್ಟೆಚ್ಚರ ವಹಿಸಲಾಗಿದೆ. ಇಲ್ಲಿನ ಸಾಯಿನಗರ, ಪೊಲೀಸ್ ಠಾಣೆ ರಸ್ತೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರಮುಖ ವೃತ್ತಗಳನ್ನೆಲ್ಲ ಬಂದ್ ಮಾಡಿರುವ ಪೊಲೀಸರು, ಜನರ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)