ಕಲಬುರಗಿ: ರಾಜ್ಯದಲ್ಲಿ ಕರೊನಾ ವೈರಸ್ಗೆ ಮೊದಲ ಬಲಿಯಾಗಿದೆ. ಸೌದಿ ಅರೇಬಿಯಾದಿಂದ ಬಂದಿದ್ದ 75 ವರ್ಷದ ವೃದ್ಧ ಶಂಕಿತ ಕರೊನಾ ವೈರಸ್ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮಹಮದ ಹುಸೇನ ಸಿದ್ದಿಕಿ ಮೃತಪಟ್ಟ ವ್ಯಕ್ತಿ. ಈತ ಇತ್ತೀಚೆಗೆ ದುಬೈನಿಂದ ಕಲಬುರಗಿಗೆ ಬಂದಿದ್ದ. ವಾರದಿಂದ ಶೀತ ಹಾಗೂ ಜ್ವರದಿಂದ ನರಳುತ್ತಿದ್ದರು. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಿದ್ದಿಕಿ ಅಂತ್ಯ ಸಂಸ್ಕಾರ ನಡೆಯುವವರೆಗೂ ತಾಲೂಕು ಆರೋಗ್ಯಾಧಿಕಾರಿಗಳು ಉಸ್ತುವಾರಿ ವಹಿಸಿಕೊಂಡು ಸ್ಥಳದಲ್ಲೇ ಇರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.