ನ್ಯೂಸ್

ಇನ್ನೊಬ್ಬರು ಉಪಮುಖ್ಯಮಂತ್ರಿಗೂ ಕರೊನಾ ಸೋಂಕು, ಡಿಸಿಎಂ ಕಾರಜೋಳ ಆಸ್ಪತ್ರೆಗೆ ದಾಖಲು..

ಬೆಂಗಳೂರು: ರಾಜ್ಯದ ಮೂವರು ಉಪ ಮುಖ್ಯಮಂತ್ರಿಗಳಲ್ಲಿ ಈಗ ಇನ್ನೊಬ್ಬರಿಗೂ ಕರೊನಾ ಸೋಂಕು ತಗುಲಿದ್ದು, ಅವರು ಅಧಿವೇಶನದಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದಾರೆ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, "ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ದೃಢ ಪಟ್ಟಿದ್ದು, ಯಾವುದೇ ರೋಗಲಕ್ಷಣಗಳು ಇಲ್ಲದಿದ್ದರೂ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನನ್ನ ಸಂಪರ್ಕದಲ್ಲಿದ್ದವರು ಮುಂಜಾಗ್ರತೆ ವಹಿಸಿ, ಕೋವಿಡ್ ಪರೀಕ್ಷೆಗೊಳಪಟ್ಟು ಕ್ವಾರಂಟೈನ್​ನಲ್ಲಿ ಇರಬೇಕು" ಎಂಬುದಾಗಿ ಅವರು ಕೋರಿಕೊಂಡಿದ್ದಾರೆ.

ತಮ್ಮೆಲ್ಲರ ಹಾರೈಕೆಯಿಂದ ಕರೊನಾ ವೈರಾಣುವಿನಿಂದ ಶೀಘ್ರವಾಗಿ ಗುಣಮುಖವಾಗಿ ಎಂದಿನಂತೆ ಕಾರ್ಯಪ್ರವೃತ್ತನಾಗುತ್ತೇನೆ ಎಂದೂ ಅವರು ಹೇಳಿದ್ದಾರೆ. ಈಗಾಗಲೇ ಡಿಸಿಎಂ ಡಾ.ಸಿ.ಎನ್​. ಅಶ್ವತ್ಥನಾರಾಯಣ ಅವರಿಗೂ ಸೋಂಕು ದೃಢಪಟ್ಟಿದ್ದು, ಅವರು ಕ್ವಾರಂಟೈನ್​ನಲ್ಲಿದ್ದಾರೆ.