ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಐಸಿಎಂಆರ್ ಹೇಳಿದೆ. ಇನ್ನು ಕೋವಿಡ್-19 ಸಿದ್ಧತೆಗಳ ಪರಿಶೀಲನೆ ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಬೆಂಗಳೂರು: ದೇಶದಲ್ಲಿ ಮತ್ತೆ ಕೋವಿಡ್ ಆತಂಕ ಹೆಚ್ಚಾಗುತ್ತಿದೆ. ಸದ್ಯಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,395ಕ್ಕೆ ಏರಿಕೆಯಾಗಿದೆ. ಈವರೆಗೆ ಕೋವಿಡ್ನಿಂದಾಗಿ 22 ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ದೆಹಲಿಯಲ್ಲಿ 375 ಸಕ್ರಿಯ ಪ್ರಕರಣಗಳು ವರದಿಯಾಗಿವೆ.
ಈ ಸಮಯದಲ್ಲಿಯೇ ಶಾಲೆಗಳು ಆರಂಭಗೊಂಡಿರುವ ಹಿನ್ನೆಲೆ ಪೋಷಕರು ಹಾಗೂ ಶಾಲೆಗಳಲ್ಲಿ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಸೂಚಿಸಲಾಗಿದೆ. ಇದರಿಂದ ಮಕ್ಕಳ ಆರೋಗ್ಯ ಕುರಿತಾಗಿ ಎಚ್ಚರಿಕೆ ಇಡಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕೋವಿಡ್ ಗುಣಲಕ್ಷಣಗಳು ಕಂಡುಬಂದರೆ ಕೂಡಲೇ ಪೋಷಕರಿಗೆ ತಿಳಿಸಿ ಸಿಬ್ಬಂದಿ ಕೂಡ ಕೋವಿಡ್ ಕುರಿತಾಗಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಆರೋಗ್ಯ ಸಚಿವರು, ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು. ಆ ಬಳಿಕ ಮಾತನಾಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ಸ್ಥಿತಿಯಿಂದ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್ ವಸ್ತುಸ್ಥಿತಿಯನ್ನು ಅವಲೋಕಿಸಿದ್ದು, ರಾಜ್ಯದ ಆರೋಗ್ಯ ಇಲಾಖೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಅತ್ತಿಗೆಯ ತಲೆ ಕತ್ತರಿಸಿ ರಸ್ತೆಯಲ್ಲಿ ರುಂಡ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ| bengal-horror
ಕೋವಿಡ್ ಹೊಸ ಮಾರ್ಗಸೂಚಿ:
ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ಕೆಮ್ಮು, ಶೀತ, ಜ್ವರ ಇರುವ ಮಕ್ಕಳಿಗೆ ಕಡ್ಡಾಯ ರಜೆ ನೀಡಬೇಕು ಎಂದು ಶಾಲಾ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಮಾಸ್ಕ್ ಧರಿಸಿಕೊಂಡರೆ ಉತ್ತಮ.
ಶಾಲೆಗಳಿಂದಲೂ ಮುನ್ನೆಚ್ಚರಿಕೆ ಕ್ರಮ
ಶಾಲೆಗಳಲ್ಲಿ ಸ್ವಚ್ಛತೆ, ಹಾಗೂ ಕೋವಿಡ್ ನಿಯಮ ಪಾಲಿಸಬೇಕು
ಶಾಲಾ ಸಿಬ್ಬಂದಿಯಲ್ಲಿ ಗುಣಲಕ್ಷಣ ಕಂಡು ಬಂದಲ್ಲಿ ಮುಂಜಾಗೃತ ಕ್ರಮ ಪಾಲಿಸಬೇಕು
ಕೋವಿಡ್ ಗುಣಲಕ್ಷಣಗಳಿರುವ ಮಕ್ಕಳು ಶಾಲೆಗೆ ಬಂದ್ರೆ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಬೇಕು
ಸಂಪೂರ್ಣವಾಗಿ ಗುಣಮುಖರಾದ ಬಳಿಕವೇ ಶಾಲೆಗಳಿಗೆ ಕಳುಹಿಸಬೇಕು
ಮಕ್ಕಳಲ್ಲಿ ಜ್ವರ , ಕೆಮ್ಮು, ನೆಗಡಿ ಗುಣಲಕ್ಷಣಗಳು ಬಂದರೆ ಶಾಲೆಗೆ ಕಳುಹಿಸಬಾರದು