ಬೆಂಗಳೂರು: ಕರೊನಾ ವೈರಸ್ಗೆ ಕರ್ನಾಟಕ ತತ್ತರಿಸುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 55 ಹೊಸ ಕೇಸ್ಗಳು ಪತ್ತೆಯಾಗಿವೆ. ಇವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಯುವಕರು ಎಂಬ ಆತಂಕಕಾರಿ ವರದಿ ಬಹಿರಂಗಗೊಂಡಿದೆ.
ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 1147ಕ್ಕೆ ಏರಿದೆ. ಇವರಲ್ಲಿ 506 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದರೆ 600 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಸೋಂಕು 37 ಮಂದಿಯನ್ನು ಬಲಿ ಪಡೆದಿದೆ.
ಇದನ್ನೂ ಓದಿ: VIDEO: ಸರ್ಕಾರವನ್ನು ಪ್ರಶ್ನಿಸಿದ್ದಕ್ಕೆ ಆಗ ಅಮಾನತು ಶಿಕ್ಷೆ; ಈಗ ಕಟ್ಟಿ, ಥಳಿಸಿ, ಎಳೆದಾಡಿದ ಪೊಲೀಸರು- ವೀಡಿಯೋ ವೈರಲ್
ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ಕಂಡುಬಂದಿರುವ ಹೊಸ ಸೋಂಕುಗಳಲ್ಲಿ ಪ್ರತಿದಿನದಂತೆಯೇ ಹೊರ ರಾಜ್ಯಗಳಿಂದ ಬಂದಿರುವವರೇ ಹೆಚ್ಚು ಮಂದಿ. ಆದರೆ ಇವರ ಪೈಕಿ ಹೆಚ್ಚಿನವರು ಮಕ್ಕಳು ಮತ್ತು ಯುವಕ-ಯುವತಿಯರು.
ಮಂಡ್ಯದಲ್ಲಿ ಮುಂಬೈನಿಂದ ಬಂದಿರುವ ಒಂದು ವರ್ಷದ ಮಗುವಿಗೆ, ಹಾಸನದಲ್ಲಿ 3 ವರ್ಷದ ಮಗುವಿಗೂ ಸೋಂಕು ತಗುಲಿದೆ. ಇದನ್ನು ಹೊರತುಪಡಿಸಿದರೆ, 40 ವರ್ಷದಿಂದ ಕಡಿಮೆ ವಯೋಮಾನದವರೇ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕಂಡುಬಂದಿರುವ ಸೋಂಕಿತರ ಸಂಖ್ಯೆಯಲ್ಲಿ ಮಂಡ್ಯ 21, ಕಲಬುರಗಿ 10, ಹಾಸನ 6, ಯಾದಗಿರಿ 3, ಕೋಲಾರ 3, ದಕ್ಷಿಣ ಕನ್ನಡ 2, ಧಾರವಾಡ 2, ಶಿವಮೊಗ್ಗ 2 ಹಾಗೂ ಉಡುಪಿ, ವಿಜಯಪುರ, ಮಂಡ್ಯ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.
ಹೆಚ್ಚಿನ ವಿವರ ಇಲ್ಲಿದೆ: