ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 187 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವ ಪೈಕಿ 110 ಮಂದಿ ಬಿಡುಗಡೆ ಹೊಂದಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3408ಕ್ಕೆ ಏರಿದೆ. ಈ ಪೈಕಿ ಇದಾಗಲೇ 132 ಮಂದಿ ಬಿಡುಗಡೆ ಹೊಂದಿದ್ದು, 2026 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾದಗಿರಿಯಲ್ಲಿ 257, ಮಂಡ್ಯದಲ್ಲಿ 224, ಉಡುಪಿಯಲ್ಲಿ 196, ರಾಯಚೂರಿನಲ್ಲಿ 179, ಹಾಸನ 143, ಬೀದರ್ 119, ಬೆಂಗಳೂರು ನಗರ 136 ಹಾಗೂ ಕಲಬುರಗಿಯಲ್ಲಿ 170 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಜಿಲ್ಲೆಗಳಲ್ಲಿನ ಹಾಲಿ ಸೋಂಕಿತರ ಸಂಖ್ಯೆ 100ಕ್ಕಿಂತ ಕಡಿಮೆ ಇದೆ.
ಬೆಂಗಳೂರಿನ 90 ವರ್ಷ ವೃದ್ಧರೊಬ್ಬರು ಕರೊನಾಕ್ಕೆ ಬಲಿಯಾಗಿದ್ದಾರೆ. ಇವರು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ, ಇಲ್ಲಿಯವರೆಗೆ ಕರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 52ಕ್ಕೆ ಏರಿದೆ.
ಹೊಸ ಸೋಂಕು ಪ್ರಕರಣ ಈ ರೀತಿ ಇದೆ.
ಬೆಂಗಳೂರು ನಗರ 28; ಕಲಬುರಗಿ 24; ಮಂಡ್ಯ 15; ಉಡುಪಿ 73; ಹಾಸನ 16; ಬೀದರ್ 2; ಚಿಕ್ಕಬಳ್ಳಾಪುರ 5; ದಕ್ಷಿಣ ಕನ್ನಡ 4; ವಿಜಯಪುರ 1; ಬಾಗಲಕೋಟೆ 2; ಬಳ್ಳಾರಿ 3; ಶಿವಮೊಗ್ಗ 9; ಧಾರವಾಡ 2; ಕೋಲಾರ 1; ಹಾವೇರಿ 1. ರಾಮನಗರ 1.
ಉಳಿದಂತೆ ಯಾದಗಿರಿ, ರಾಯಚೂರು, ಬೆಳಗಾವಿ, ದಾವಣಗೆರೆ, ಮೈಸೂರು, ಉತ್ತರ ಕನ್ನಡ, ಚಿತ್ರದುರ್ಗ, ಗದಗ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಕೊಪ್ಪಳ ಮತ್ತು ಕೊಡಗಿನಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.
ಸಂಪೂರ್ಣ ವಿವರ ಇಲ್ಲಿದೆ: