ನ್ಯೂಸ್

ಕರೊನಾ ಬುಲೆಟಿನ್​; ಇಂದು ಸೋಂಕಿತರಿಗಿಂತ ಬಿಡುಗಡೆ ಆದವರೇ ಅಧಿಕ

ಬೆಂಗಳೂರು: ರಾಜ್ಯದಲ್ಲಿ ಶನಿವಾರವೊಂದೇ ದಿನ 1,522 ಕೋವಿಡ್​-19 ಪಾಸಿಟಿವ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಇದುವರೆಗಿನ ಸೋಂಕಿತರ ಒಟ್ಟು ಪ್ರಮಾಣ 8,82,608ಕ್ಕೆ ತಲುಪಿದೆ.


ಇನ್ನು ಗುಣಮುಖರ ಪೈಕಿ ಒಂದೇ ದಿನದಲ್ಲಿ 2,133 ಮಂದಿ ವಿವಿಧ ಆಸ್ಪತ್ರೆ ಹಾಗೂ ಕೋವಿಡ್​ ಕೇರ್ ಕೇಂದ್ರಗಳಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಇದುವರೆಗೂ ಗುಣವಾಗಿ ಬಿಡುಗಡೆ ಆದವರ ಸಂಖ್ಯೆ 8,46,082ಕ್ಕೆ ಏರಿಕೆಯಾಗಿದೆ.


ಅದಾಗ್ಯೂ ರಾಜ್ಯದಲ್ಲಿ 24,757 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಗಂಭೀರ ರೋಗಲಕ್ಷಣಗಳಿರುವ 384 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಒಂದೇ ದಿನದಲ್ಲಿ 12 ಮಂದಿ ಕೋವಿಡ್​ಗೆ ಬಲಿಯಾಗಿದ್ದು, ಇದುವರೆಗೆ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 11,750ಕ್ಕೆ ತಲುಪಿದೆ.