ನ್ಯೂಸ್

ಕರೊನಾ ಬುಲೆಟಿನ್​: ಸೋಂಕಿತರಿಗಿಂತ ಗುಣವಾದವರೇ ಅಧಿಕ

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಹೊಸದಾಗಿ 9,523 ಕರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಒಟ್ಟು ಪ್ರಮಾಣ 7,10,309ಕ್ಕೆ ತಲುಪಿದೆ. ಅದಾಗ್ಯೂ ಭಾನುವಾರ ಸೋಂಕಿತರಿಗಿಂತ ಗುಣವಾದವರ ಸಂಖ್ಯೆಯೇ ಹೆಚ್ಚಿರುವುದು ಸ್ವಲ್ಪ ಸಮಾಧಾನದ ಸಂಗತಿ.

ಭಾನುವಾರ ಒಂದೇ ದಿನ ಆಸ್ಪತ್ರೆಯಿಂದ 10,107 ಮಂದಿ ಬಿಡುಗಡೆ ಆಗಿದ್ದು, ಈ ಮೂಲಕ ರಾಜ್ಯದಲ್ಲಿ ಕರೊನಾದಿಂದ ಗುಣವಾದವರ ಸಂಖ್ಯೆ 5,80,054ಕ್ಕೆ ತಲುಪಿದೆ. ಆದರೆ ರಾಜ್ಯದಲ್ಲಿ ಸದ್ಯ 1,20,270 ಸಕ್ರಿಯ ಪ್ರಕರಣಗಳಿದ್ದು, ಗಂಭೀರ ಪರಿಸ್ಥಿತಿಯಿಂದಾಗಿ 904 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಸರದ ಸಂಗತಿ ಎಂದರೆ ಭಾನುವಾರ ಒಂದೇ ದಿನ 75 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಕರೊನಾದಿಂದ ಮೃತಪಟ್ಟವರ ಸಂಖ್ಯೆ 9,966ಕ್ಕೆ ತಲುಪಿದೆ.