ಬೆಂಗಳೂರು: ರಾಜ್ಯದ ಕರೊನಾ ಬುಲೆಟಿನ್ ಬಿಡುಗಡೆ ಆಗಿದ್ದು, ಇಂದು ನಿನ್ನೆಗಿಂತ ಹೆಚ್ಚು ಸೋಂಕು ಕಂಡು ಬಂದಿದ್ದರೂ, ಸಾವಿನ ಸಂಖ್ಯೆ ಕಡಿಮೆ ಆಗಿದೆ. ಭಾನುವಾರ ಹೊಸದಾಗಿ 9,543 ಸೋಂಕಿತರು ಪತ್ತೆಯಾಗಿದ್ದು, ರಾಜ್ಯದಲ್ಲಿನ ಸೋಂಕಿತರ ಪ್ರಮಾಣ 5,75,566ಕ್ಕೆ ಏರಿದೆ.
ಮತ್ತೊಂದೆಡೆ ಇಂದು ರಾಜ್ಯಾದ್ಯಂತ ಒಟ್ಟು 6,522 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಇದುವರೆಗೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆದವರ ಸಂಖ್ಯೆ 4,62,241ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯ 1,04,724 ಇದ್ದು, 835 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಜತೆಗೆ 1,62,847 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಮತ್ತೊಂದೆಡೆ ಭಾನುವಾರವೊಂದೇ ದಿನ 79 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಶನಿವಾರ ಹೊಸದಾಗಿ 8,811 ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,66,023 ಆಗಿತ್ತು. ಶನಿವಾರವೊಂದೇ ದಿನ 5,417 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೂ, 86 ಜನ ಕರೊನಾಗೆ ಬಲಿಯಾಗಿದ್ದರು.