ನವದೆಹಲಿ: ಭಾರತದಲ್ಲಿ ಗುರುವಾರ ಕರೊನಾ ಸೋಂಕಿನ 2,364 ಹೊಸ ಪ್ರಕರಣಗಳು ದೃಢಪಟ್ಟಿವೆ ಹಾಗೂ 10 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 4,31,29,563ಕ್ಕೆ ಏರಿದೆ.
ಒಟ್ಟು 5,24,303 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮರಣ ದರ ಶೇಕಡ 1.22 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,419ಕ್ಕೆ ಇಳಿದಿದ್ದು ಒಟ್ಟು ಸೋಂಕಿನ ಶೇಕಡ 0.04 ಆಗಿದೆ ಎಂದು ಸರ್ಕಾರ ವಿವರಿಸಿದೆ. ರಾಷ್ಟ್ರೀಯ ಚೇತರಿಕೆ ದರ ಶೇಕಡ 98.75 ಆಗಿದೆ. ಸಾಂಕ್ರಾಮಿಕತೆಯ ದೈನಿಕ ಪಾಸಿಟಿವಿಟಿ ದರ ಶೇ. 0.50 ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 0.55 ಆಗಿದೆ ಎಂದು ಸಚಿವಾಲಯ ಹೇಳಿದೆ.ದೇಶದಲ್ಲಿ ಇದುವರೆಗೆ 4,25,89,841 ರೋಗಿಗಳು ಗುಣಮುಖರಾಗಿದ್ದಾರೆ. ದೇಶದಾದ್ಯಂತ ನಡೆಸಲಾಗುತ್ತಿರುವ ಕೋವಿಡ್ ತಡೆ ಲಸಿಕೆ ಅಭಿಯಾನದಡಿ ಇದುವರೆಗೆ ನೀಡಲಾದ ಲಸಿಕೆ ಪ್ರಮಾಣ 191.79 ಕೋಟಿ ಡೋಸ್ ದಾಟಿದೆ.
ಗುರುವಾರ ವರದಿಯಾದ 10 ಸಾವಿನ ಪೈಕಿ ಆರು ಕೇರಳದಲ್ಲಿ ದಾಖಲಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.