ನ್ಯೂಸ್

VIDEO | ರಷ್ಯಾ ಯುವತಿಯರ ಡ್ಯಾನ್ಸ್​​ ನೋಡಲು ನೂಕುನುಗ್ಗಲು; ಪೊಲೀಸರಿಂದ ಲಾಠಿ ಪ್ರಹಾರ

ಮೋಹನ್​ ಶೆಟ್ಟಿ

ಝಾನ್ಸಿ: ರಷ್ಯಾದ ಹುಡುಗಿಯರ ಡ್ಯಾನ್ಸ್​ ಕಾರ್ಯಕ್ರಮದಲ್ಲಿ ನೂಕುನುಗ್ಗಲಿಗೆ ಕಾರಣರಾದ ಜನರ ಮೇಲೆ ಪೊಲೀಸರು ಏಕಾಏಕಿ ಲಾಠಿ ಚಾರ್ಚ್​ ಮಾಡಿದ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಈ ದೃಶ್ಯ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಝಾನ್ಸಿಯ ಮೌರಾನಿಪುರದಲ್ಲಿ ಜಲ್ವಿಹಾರ್ ಮಹೋತ್ಸವದಲ್ಲಿ ರಷ್ಯಾದ ಹುಡುಗಿಯರ ಡ್ಯಾನ್ಸ್​ ಪ್ರದರ್ಶನವನ್ನು ಗುರುವಾರ (ಅ.5) ರಾತ್ರಿ ಆಯೋಜಿಸಲಾಗಿತ್ತು. ಈ ವೇಳೆ ಇದು ಭಾರೀ ಗೊಂದಲಕ್ಕೆ ಗುರಿಯಾಗಿದ್ದು, ನೃತ್ಯ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರ ಮೇಲೆ ಪೊಲೀಸರ ಲಾಠಿ ಪ್ರಹಾರ ಮಾಡಿದ್ದಾರೆ.

ಪೊಲೀಸರ ಲಾಠಿ ಪ್ರಹಾರಕ್ಕೆ ಸಿಲುಕಿದ ಅನೇಕರು ಸ್ಥಳದಿಂದ ಚೆಲ್ಲಾಪಿಲ್ಲಿಯಾಗಿದ್ದಾರೆ. ಘಟನೆ ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಗಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಮೌರಾನಿಪುರದಲ್ಲಿರುವ ಝಾನ್ಸಿ ಪ್ರಧಾನ ಕಛೇರಿಯಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಈ ಮೇಳವು ಪೊಲೀಸ್ ನಿರ್ಬಂಧಗಳ ನಡುವೆಯೂ ರಷ್ಯಾದ ಕಲಾವಿದರಿಗೆ ಆತಿಥ್ಯ ವಹಿಸಿದೆ ಎಂದು ಆರೋಪಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೊಲೀಸರು ಜನಸಂದಣಿ ನಿಯಂತ್ರಿಸಲು ಲಾಠಿಚಾರ್ಜ್ ಮಾಡಿದ್ದಾರೆ. ಗಾಯಗೊಂಡ ವ್ಯಕ್ತಿಗಳನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಘಟನೆಯಲ್ಲಿ ರಾಜ್ ಎಂಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ,(ಏಜೆನ್ಸೀಸ್).