ಕಡೂರು ತಾಲೂಕು ನೊಳಂಬ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಗುರುಪ್ರಸಾದ್ ಅವರನ್ನು ಸಮಾಜದ ಮುಖಂಡರು ಅಭಿನಂದಿಸಿದರು. ಕಾಮನಕೆರೆ ಶಶಿಧರ್, ಬಸವರಾಜಪ್ಪ, ರಾಜು, ಕುಶಕುಮಾರ್, ಅರೇಹಳ್ಳಿ ಮಲ್ಲಿಕಾರ್ಜುನ್ ಮತ್ತಿತರರಿದ್ದರು.  
ನ್ಯೂಸ್

ನೊಳಂಬ ಲಿಂಗಾಯತ ಸಮಾಜಕ್ಕೆ ಗುರುಪ್ರಸಾದ್ ಅಧ್ಯಕ್ಷ

ಕಡೂರು: ತಾಲೂಕು ನೊಳಂಬ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಬಳ್ಳೇಕೆರೆ ಗ್ರಾಮದ ಬಿ.ಗುರುಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ನೊಳಂಬ ಲಿಂಗಾಯತ ಕೇಂದ್ರ ಸಮಿತಿ ಕಾರ್ಯದರ್ಶಿ ಕಾಮನಕೆರೆ ಶಶಿಧರ್ ಘೋಷಿಸಿದರು.
ಎಲ್‌ಐಸಿ ಕಚೇರಿಯ ಹಿಂಭಾಗದ ನೊಳಂಬ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಭಾನುವಾರ ನಡೆದ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಗುರುಪ್ರಸಾದ್‌ರಾಜ್ಯದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ತಾಲೂಕು ನೊಳಂಬ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.
ನೂತನ ಅಧ್ಯಕ್ಷ ಬಿ.ಗುರುಪ್ರಸಾದ್ ಮಾತನಾಡಿ, ಎಲ್ಲ ಸಮಾಜದ ಮುಖಂಡರ ಸಲಹೆ ಸೂಚನೆ ಪಡೆದು ಸಮಾಜವನ್ನು ಮುನ್ನೆಡೆಸುತ್ತೇವೆ. ಮೊದಲು ಶೈಕ್ಷಣಿಕವಾಗಿ ಸಮಾಜಕ್ಕೆ ಕೊಡುಗೆ ನೀಡಬೇಕೆಂಬುದು ನಮ್ಮ ಮುಖ್ಯ ಆಶಯವಾಗಿದೆ. ರಾಜಕೀಯದಿಂದ ದೂರ ಇದ್ದು ಸಮಾಜವನ್ನು ಸಂಘಟಿಸುತ್ತೇನೆ ಎಂದರು.
ಸಮಾಜದ ಮುಖಂಡರಾದ ಕೆ.ಬಿ.ಬಸವರಾಜಪ್ಪ, ವಕೀಲರಾದ ರಾಜು, ಜಗದೀಶ್, ಕಲ್ಲೇಶಪ್ಪ, ದೇವನೂರು ಬಸವರಾಜಪ್ಪ, ಶಿಕ್ಷಕ ಅರೇಹಳ್ಳಿ ಮಲ್ಲಿಕಾರ್ಜುನ್ ಮತ್ತಿತರರಿದ್ದರು.