ಬೆಂಗಳೂರು: ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್) ಸ್ಥಾಪಿಸುವ ಧಾವಂತವನ್ನು ಪ್ರಭಾವಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದು, ನಿಯಮಗಳನ್ನು ಗಾಳಿಗೆ ತೂರಿ ಹತ್ತಾರು ಪ್ಯಾಕ್ಸ್ಗಳು ತೆರೆದಿರುವುದು ಬಯಲಾಗಿದೆ. ಸ್ವಹಿತಾಸಕ್ತಿ ಸುಳಿಯಲ್ಲಿ ಸಹಕಾರ ಕುರಿತು ‘ವಿಜಯವಾಣಿ’ ಪ್ರಕಟಿಸಿದ ವರದಿ ಬೆನ್ನಲ್ಲೇ ಸಹಕಾರ ಸಂಘಗಳ ನಿಬಂಧಕರ ಪೂರ್ವಾನುಮತಿ ಪಡೆಯದೆ ಹಲವೆಡೆ ಪ್ಯಾಕ್ಸ್ಗಳು ತಲೆ ಎತ್ತಿದ ಕುರಿತು ಮಾಹಿತಿ ಲಭ್ಯವಾಗಿದೆ.
ಈ ವರದಿಯಿಂದ ಸ್ಪೂರ್ತಿ ಪಡೆದ ಉತ್ತರಕನ್ನಡ ಜಿಲ್ಲೆ ಯಲ್ಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೇರವಾಗಿ ನಿಬಂಧಕರಿಗೆ ದೂರು ಸಲ್ಲಿಸಿ, ಅಗತ್ಯ ಕ್ರಮವಹಿಸಲು ಒತ್ತಾಯಿಸಿದೆ. ನಿಯಮಗಳನ್ನು ಕಡೆಗಣಿಸಿ ಎರಡು ಹೊಸ ಸಂಘಗಳನ್ನು ನೋಂದಣಿ ಮಾಡಿದ ಪರಿಣಾಮ ಅಸ್ತಿತ್ವದಲ್ಲಿರುವ ಯಲ್ಲಾಪುರ ಸಂಘ ದುರ್ಬಲವಾಗಲಿದೆ. ಕೊಟ್ಟ ಸಾಲವು ಹಿಂತಿರುಗುವುದಿಲ್ಲ, ಹೊಸ ಸದಸ್ಯರಿಗೆ ಸಾಲವೂ ಸಿಗದಂತಹ ಪರಿಸ್ಥಿತಿ ತಲೆದೋರಲಿದೆ ಎಂಬ ಆತಂಕ ವ್ಯಕ್ತಪಡಿಸಿದೆ.
ಮೌಖಿಕ ಸೂಚನೆ?: ಬಿಜೆಪಿ ವರಿಷ್ಠರು ಹಾಗೂ ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಸಂತೃಪ್ತಪಡಿಸಲೆಂದು ರಾಜ್ಯದ ಪ್ರಭಾವಿ ನಾಯಕರೊಬ್ಬರು ಹೊಸ ಪ್ಯಾಕ್ಸ್ಗಳ ಸ್ಥಾಪನೆಗೆ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಳ್ಳಾರಿ-16, ಹಾಸನ-8, ಉತ್ತರಕನ್ನಡ-6, ತುಮಕೂರು-5, ಚಿಕ್ಕಬಳ್ಳಾರಿ-4 ಪ್ಯಾಕ್ಸ್ಗಳು ಗ್ರಾ.ಪಂ.ವಾರು ಅಸ್ತಿತ್ವಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಗ್ರಾಮಸಭೆಗಳಲ್ಲಿ ಅನುಮೋದನೆ ಮತ್ತು ನಿಯಮಗಳ ಪಾಲನೆ ಕುರಿತು ವ್ಯವಸ್ಥಿತ ದಾಖಲೀಕರಣ ಕಾರ್ಯ ನಡೆಯುತ್ತಿದೆ. ಹೊಸ ಸಂಘಗಳ ನೋಂದಣಿಗೆ ಉಪ ವಿಭಾಗದ ಸಹಾಯಕ ನಿಬಂಧಕರು ಸಲ್ಲಿಸಿದ ಪ್ರಸ್ತಾವನೆಗೆ ಆಯಾ ಜಿಲ್ಲಾ ಉಪ ನಿಬಂಧಕರ ಹಂತದಲ್ಲೇ ಅನುಮತಿ ನೀಡಲಾಗುತ್ತಿದ್ದು, ಆಂತರಿಕ ಸಂದೇಶ ಮತ್ತು ಒತ್ತಡವೇ ಕಾರಣವೆಂದು ತಿಳಿದಿದೆ.
ಕೆಲವು ಸಂಘಗಳ ರಚನೆ ಕುರಿತು ನಿಬಂಧಕರ ಗಮನಕ್ಕೆ ಬಂದಿದ್ದರೂ ಒತ್ತಡದ ಕಾರಣ ಕೈಚೆಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಂಘಗಳ ರಚನೆ ವಿಷಯದಲ್ಲಿ ರೈತರಿಗೆ ಅನುಕೂಲತೆಗಿಂತ ಬೇರೇನೋ ರಹಸ್ಯ ಕಾರ್ಯಸೂಚಿಯಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಆರ್ಥಿಕವಾಗಿ ಕಾರ್ಯಸಾಧು ಹೌದೋ ಅಲ್ಲವೋ ? ಇರುವ ಪ್ಯಾಕ್ಸ್ಗಳ ಸ್ಥಿತಿಗತಿ ಏನೆಂದು ಪರಾಮಶಿಸದೆ ಇರುವ ಸಂಘಗಳು ಅತಂತ್ರವಾಗುತ್ತವೆ. ಹೊಸ ಸಂಘಗಳ ಸ್ಥಾಪನೆ ಉದ್ದೇಶವೂ ಈಡೇರದು. ಚಾಲ್ತಿ ಸಂಘಗಳ ಸದಸ್ಯರು ಹೂಡಿದ ಹಣವೂ ಪಡೆಯಲು ಅಲೆದಾಡುವ ಪರಿಸ್ಥಿತಿ ತಲೆದೋರಲಿದೆ. ಸಮರ್ಪಕ ಅನುಷ್ಠಾನದಿಂದ ನಿರ್ಧಾರವೊಂದು ಉತ್ತಮವಾಗಲು ಸಾಧ್ಯವೆಂದು ಸಹಕಾರಿ ಧುರೀಣರು ಹೇಳುತ್ತಾರೆ. ಬೆಳಗಾವಿ ಜಿಲ್ಲೆಯ ಪ್ರಭಾವಿಗಳಿಬ್ಬರ ಪೈಪೋಟಿ ಪರಿಣಾಮ ಆ ಜಿಲ್ಲೆಯಲ್ಲಿ 1,000 ಪ್ಯಾಕ್ಸ್ಗಳು ತಲೆ ಎತ್ತಿದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಸೂಕ್ತವೆಂಬ ಕಾರಣಕ್ಕೆ ಸ್ಥಾಪಿಸಿದ ಪ್ಯಾಕ್ಸ್ಗಳಿಗೆ ಡಿಸಿಸಿ ಬ್ಯಾಂಕ್ ಸದಸ್ಯತ್ವ ನೀಡದೆ ಸತಾಯಿಸುತ್ತಿರುವ ಆರೋಪಗಳಿವೆ.
ಆತಂಕವೇಕೆ?: ಗ್ರಾ.ಪಂ.ವಾರು ಪ್ಯಾಕ್ಸ್ಗಳ ಸ್ಥಾಪನೆಯಿಂದ ಹೆಚ್ಚೆಚ್ಚು ರೈತರಿಗೆ ಅನುಕೂಲವಾಗುತ್ತದೆ. ಹೊಸಬರಿಗೆ ಸಾಲ ಇನ್ನಿತರ ಸವಲತ್ತುಗಳು ಸಿಗಲಿದ್ದು, ಗ್ರಾಮೀಣ ಪ್ರದೇಶದ ಆರ್ಥಿಕ ಸಬಲತೆಗೆ ನೆರವಾಗಲಿದೆ ಇತ್ಯಾದಿ ಪೂರಕ ಅಂಶಗಳಿವೆ. ಆದರೂ ನಬಾರ್ಡ್ ಮಾರ್ಗಸೂಚಿ, ಅರ್ಹತೆಗೆ ವಿಧಿಸಿದ ಮಾನದಂಡ, ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ಸಹಕಾರ ಅಭಿವೃದ್ಧಿ ಅಧಿಕಾರಿ ವರದಿ, ನಿಬಂಧಕರ ಪೂರ್ವಾನುಮತಿ ಇತ್ಯಾದಿ ಉಲ್ಲಂಘಿಸಿ ಆತುರಾತುರವಾಗಿ ಸಂಘ ಸ್ಥಾಪಿಸಿದರೆ ಅನನುಕೂಲವೆ ಜಾಸ್ತಿ ಎನ್ನುವುದು ಆತಂಕಕ್ಕೆ ಕಾರಣ.
ಬಳ್ಳಾರಿ-16, ಹಾಸನ-8, ಉತ್ತರಕನ್ನಡ-6, ತುಮಕೂರು-5, ಚಿಕ್ಕಬಳ್ಳಾರಿ-4 ಪ್ಯಾಕ್ಸ್ಗಳು ಗ್ರಾ.ಪಂ.ವಾರು ಅಸ್ತಿತ್ವಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಗ್ರಾಮಸಭೆಗಳಲ್ಲಿ ಅನುಮೋದನೆ ಮತ್ತು ನಿಯಮಗಳ ಪಾಲನೆ ಕುರಿತು ವ್ಯವಸ್ಥಿತ ದಾಖಲೀಕರಣ ಕಾರ್ಯ ನಡೆಯುತ್ತಿದೆ. ಹೊಸ ಸಂಘಗಳ ನೋಂದಣಿಗೆ ಉಪ ವಿಭಾಗದ ಸಹಾಯಕ ನಿಬಂಧಕರು ಸಲ್ಲಿಸಿದ ಪ್ರಸ್ತಾವನೆಗೆ ಆಯಾ ಜಿಲ್ಲಾ ಉಪ ನಿಬಂಧಕರ ಹಂತದಲ್ಲೇ ಅನುಮತಿ ನೀಡಲಾಗುತ್ತಿದ್ದು, ಆಂತರಿಕ ಸಂದೇಶ ಮತ್ತು ಒತ್ತಡವೇ ಕಾರಣವೆಂದು ತಿಳಿದಿದೆ.
ಕೆಲವು ಸಂಘಗಳ ರಚನೆ ಕುರಿತು ನಿಬಂಧಕರ ಗಮನಕ್ಕೆ ಬಂದಿದ್ದರೂ ಒತ್ತಡದ ಕಾರಣ ಕೈಚೆಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಂಘಗಳ ರಚನೆ ವಿಷಯದಲ್ಲಿ ರೈತರಿಗೆ ಅನುಕೂಲತೆಗಿಂತ ಬೇರೇನೋ ರಹಸ್ಯ ಕಾರ್ಯಸೂಚಿಯಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಆರ್ಥಿಕವಾಗಿ ಕಾರ್ಯಸಾಧು ಹೌದೋ ಅಲ್ಲವೋ ? ಇರುವ ಪ್ಯಾಕ್ಸ್ಗಳ ಸ್ಥಿತಿಗತಿ ಏನೆಂದು ಪರಾಮಶಿಸದೆ ಇರುವ ಸಂಘಗಳು ಅತಂತ್ರವಾಗುತ್ತವೆ. ಹೊಸ ಸಂಘಗಳ ಸ್ಥಾಪನೆ ಉದ್ದೇಶವೂ ಈಡೇರದು. ಚಾಲ್ತಿ ಸಂಘಗಳ ಸದಸ್ಯರು ಹೂಡಿದ ಹಣವೂ ಪಡೆಯಲು ಅಲೆದಾಡುವ ಪರಿಸ್ಥಿತಿ ತಲೆದೋರಲಿದೆ. ಸಮರ್ಪಕ ಅನುಷ್ಠಾನದಿಂದ ನಿರ್ಧಾರವೊಂದು ಉತ್ತಮವಾಗಲು ಸಾಧ್ಯವೆಂದು ಸಹಕಾರಿ ಧುರೀಣರು ಹೇಳುತ್ತಾರೆ.