ನ್ಯೂಸ್

ರಜಿನಿಕಾಂತ್​ 'ಕೂಲಿ'​ಗೆ ಸಖತ್ ಡಿಮಾಂಡ್​! ಕೇರಳ, ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಫಸ್ಟ್​ ಶೋ | Coolie

Coolie: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಚಿತ್ರದ ಬಗ್ಗೆ ಸಿನಿಪ್ರಿಯರು ಹಾಗೂ ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ಇತ್ತೀಚೆಗಷ್ಟೇ ಚಿತ್ರದ 'ಮೋನಿಕಾ' ಹಾಡು ಸೂಪರ್​ ಹಿಟ್​ ಆಗಿದ್ದು, ಯೂಟ್ಯೂಬ್​ನಲ್ಲಿ ಸಖತ್ ​ಟ್ರೆಂಡ್​ ಆಗಿದೆ. ಈ ಹಾಡಿನಲ್ಲಿ ಸೌತ್​ ಬ್ಯೂಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿರುವುದು ನೋಡುಗರ ಮನಗೆದ್ದಿದೆ. ಹಾಡು ಒಂದೆಡೆಯಾದರೆ, ಸಿನಿಮಾ ರಿಲೀಸ್​ ಬಗ್ಗೆ ಚಿತ್ರರಸಿಕರ ಕೌತುಕ ದುಪ್ಪಟ್ಟಾಗಿರುವುದು ಮತ್ತೊಂದೆಡೆ.

ಇದೇ ಆ.14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ 'ಕೂಲಿ' ವೀಕ್ಷಿಸಲು ಪ್ರೇಕ್ಷಕರು ಹಾಗೂ ರಜಿನಿಕಾಂತ್ ಅಭಿಮಾನಿಗಳು ತೀವ್ರ ಕಾತರದಿಂದ ಕಾಯತೊಡಗಿದ್ದಾರೆ. ಚಿತ್ರದ ಬಿಡುಗಡೆ ಹಿನ್ನೆಲೆ ಶೀಘ್ರವೇ ಮುಂಗಡ ಬುಕ್ಕಿಂಗ್ ಕೂಡ ತೆರೆಯಲಿದೆ. ವರದಿಗಳ ಪ್ರಕಾರ, ಕೂಲಿ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನವನ್ನು ಬಹುಬೇಗನೇ ಪ್ರಾರಂಭಿಸಲು ಕೇರಳ ಮತ್ತು ಕರ್ನಾಟಕ ರಾಜ್ಯಗಳ ಚಿತ್ರಮಂದಿರಗಳು ಸಜ್ಜಾಗಿವೆ. ಇದಕ್ಕೆ ಯಾವ ಸಮಯ ಸೂಕ್ತ ಎಂಬುದನ್ನು ಈಗಾಗಲೇ ನಿರ್ಧರಿಸಲಾಗಿದೆ.

ಕೇರಳ ಮತ್ತು ಕರ್ನಾಟಕದಲ್ಲಿ ಬೆಳಗ್ಗಿನ ಶೋ ಬೆಳಗ್ಗೆ 6ರಿಂದಲೇ ಶುರುವಾಗಲಿದೆ. ಇನ್ನು ತಮಿಳುನಾಡಿನಲ್ಲಿ ಬೆಳಗ್ಗೆ 9ರಿಂದ ಮೊದಲ ಶೋ ಆರಂಭವಾಗಲಿದೆ. ಕೇರಳದ ಹಕ್ಕುಗಳನ್ನು ವಿತರಣಾ ಕಂಪನಿಯಾದ ಹಸನ್ ಮೀನು ಅಸೋಸಿಯೇಟ್ಸ್ ತೆಗೆದುಕೊಂಡಿರುವ ಕಾರಣ, ಇಂದಿನಿಂದಲೇ ಕೂಲಿ ಚಿತ್ರಕ್ಕೆ ಮುಂಗಡ ಬುಕ್ಕಿಂಗ್​ಗಳು ಶುರುವಾಗಿವೆ. ವಿಶೇಷವಾಗಿ ಚಿತ್ರವು, ಯುಕೆಯಲ್ಲಿಯೂ ಪ್ರದರ್ಶನ ಕಾಣಲಿದೆ. ಆ.14ರ ಮಧ್ಯರಾತ್ರಿ 12:30ಕ್ಕೆ (ಭಾರತೀಯ ಕಾಲಮಾನ ಬೆಳಗ್ಗೆ 5 ಗಂಟೆಗೆ) ಕೂಲಿ ಮೊದಲ ಪ್ರದರ್ಶನ ಆರಂಭವಾಗಲಿದೆ. ಮತ್ತೊಂದೆಡೆ, ದುಬೈನಲ್ಲಿಯೂ ಚಿತ್ರ ತೆರೆಕಾಣಲಿದ್ದು, ಬೆಳಗ್ಗೆ 9:30ಕ್ಕೆ ಫಸ್ಟ್​ ಶೋ ಪ್ರಾರಂಭವಾಗಲಿದೆ.

ಲೋಕೇಶ್ ನಿರ್ದೇಶನದ ಈ ಚಿತ್ರದಲ್ಲಿ ರಜಿನಿಕಾಂತ್, ನಾಗಾರ್ಜುನ, ಶ್ರುತಿ ಹಾಸನ್ ಮತ್ತು ಕನ್ನಡದ ನಟ ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್​ ಹೀರೋ ಆಮಿರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ಸಿನಿಮಾ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ತೆರೆ ಕಾಣಲಿದೆ,(ಏಜೆನ್ಸೀಸ್).