ಮಹಾರಾಷ್ಟ್ರ: ರವೀಂದರ್ ಸಿಂಗ್ ಭನ್ವರ್ ಸಿಂಗ್ ರಾಜಪುರೋಹಿತ್ ಎಂಬ ವ್ಯಕ್ತಿ ತನ್ನ ಪತ್ನಿಗೆ ಕಳೆದ 21 ವರ್ಷಗಳಿಂದ ಬೆದರಿಸಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಸದ್ಯ ಈತನ ಮೇಲೆ ಪುಣೆಯ ಯರವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಿಯ ಪ್ರಕಾರ, ರವೀಂದರ್ ಸಿಂಗ್ ಭನ್ವರ್ ಸಿಂಗ್ ರಾಜಪುರೋಹಿತ್ ಎಂಬ ವ್ಯಕ್ತಿ ಪುಣೆಯ ಯರವಾಡ ಪ್ರದೇಶದಲ್ಲಿ ವಾಸವಾಗಿದ್ದ. ಈತ ಕಳೆದ 21 ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ತನ್ನನ್ನು ಮತಾಂತರ ಮಾಡಿಕೊಂಡಿದ್ದ. ಆದರೆ ತನ್ನ ಹೆಸರನ್ನು ಮಾತ್ರ ಬದಲಾಯಿಸಿಕೊಂಡಿರಲಿಲ್ಲ. ಹೀಗಾಗಿ ಈತ ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿ ಎಂದು ಎಲ್ಲರೂ ನಂಬಿದ್ದರು. ಆದರೆ ಈತನ ಕರಾಳ ಮುಖ ಸಮಾಜಕ್ಕೆ ಪರಿಚಯವಾಗಿದ್ದೆ ಪೊಲೀಸ್ ದೂರ ದಾಖಲಾದ ಮೇಲೆ!
ತಾನು ಮತಾಂತರವಾಗಿದ್ದಲ್ಲದೇ, ಪತ್ನಿ, ಮಕ್ಕಳು ಹಾಗೂ ಪತ್ನಿಯ ಪೋಷಕರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಕಿರಿಕುಳ ನೀಡಿದ್ದಾನೆ. ಜತೆಗೆ ಮಾನಸಿಕವಾಗಿ ಹಿಂಸೆ ಕೊಟ್ಟು ಪತ್ನಿಯನ್ನು ಥಳಿಸಿದ್ದಾನೆ. ಇದರೊಂದಿಗೆ ತನ್ನ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗೆ ಕಳುಹಿಸುವಂತೆ ಪತ್ನಿಗೆ ನಿರಂತರ ಕಿರುಕುಳ ಕೊಟ್ಟಿದ್ದ ಎಂದು ಎಂದು ವರದಿಯಾಗಿದೆ.
ಇಷ್ಟಕ್ಕೆ ಸುಮ್ಮನಾಗದ ರವೀಂದರ್ ಸಿಂಗ್ ಭನ್ವರ್ ಸಿಂಗ್ ರಾಜಪುರೋಹಿತ್, ಮನೆಯಲ್ಲಿದ್ದ ಹಿಂದೂ ದೇವತೆಗಳ ವಿಗ್ರಹಗಳನ್ನು ಹಾಗೂ ಹಿಂದೂ ಧಾರ್ಮಿಕ ಸಂಕೇತಗಳನ್ನು ನದಿಗೆ ಎಸೆಯುವಂತೆ ಪತ್ನಿಗೆ ಹೇಳಿದ್ದಾನೆ. ಇದರಿಂದ ಬೇಸತ್ತ ಆತನ ಪತ್ನಿ, ನೇರವಾಗಿ ಪೊಲೀಸ್ ಠಾಣೆ ಮಟ್ಟಿಲೇರಿ ತನ್ನ ಗಂಡನ ವರ್ತನೆಯನ್ನು ಬಿಡಿಸಿಟ್ಟಿದ್ದಾಳೆ.
ಸದ್ಯ 43 ವರ್ಷದ ಮಹಿಳೆ ನೀಡಿದ ದೂರು ನೀಡಿದ್ದು, ರವೀಂದರ್ ಸಿಂಗ್ ಭನ್ವರ್ ಸಿಂಗ್ ರಾಜಪುರೋಹಿತ್ ತನ್ನ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗೆ ಸೇರಿಸಬೇಕೆಂದು ಬಯಸಿದ್ದರು. ಸದ್ಯ ಮಕ್ಕಳಿಬ್ಬರು ಪುಣೆಯ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದು, ಮನೆಯಲ್ಲಿನ ಒತ್ತಡದ ವಾತಾವರಣದಿಂದಾಗಿ ಅವರ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ ಎಂದು ಮಹಿಳೆ ಆರೋಪಿಸಿರುವುದು ದಾಖಲಾಗಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)