ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆ, ಮಹಿಳಾ ಕಿಸಾನ್​ ದಿವಸ ಕಾರ್ಯಕ್ರಮದಲ್ಲಿ ಡಾ. ಶಿವಶಂಕರ ಮೂರ್ತಿ ಮಾತನಾಡಿದರು. ಎಸ್​.ಟಿ.ಸಂಗಾ, ಡಾ.ಬಾಲಾಜಿ ನಾಯ್ಕ, ಡಾ.ಪ್ರೇಮಚಂದ, ವೀಣಾ ಚಂದಾವರಿ, ಡಾ.ಹೀನಾ ಎಂ. ಎಸ್​. ಇತರರಿದ್ದರು. 
ನ್ಯೂಸ್

ಕೃಷಿಗೆ ಮಹಿಳೆಯರ ಕೊಡುಗೆ ಅಪಾರ

ಇಂಡಿ: ಕೃಷಿಯನ್ನು ಮುನ್ನೆಲೆಗೆ ತರುವ ಮೂಲಕ ಇಡೀ ವಿಶ್ವಕ್ಕೆ ಭಾರತದ ಕೃಷಿ ಪರಿಚಯಿಸಿದವರು ಮಹಿಳೆಯರು. ಭಾರತದ ಆಹಾರೋತ್ಪಾದನೆಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಶಂಕರ ಮೂರ್ತಿ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಮತ್ತು ಮಹಿಳಾ ಕಿಸಾನ್​ ದಿವಸ ಸಭೆಯಲ್ಲಿ ಅವರು ಮಾತನಾಡಿದರು.

ನಿವೃತ್ತ ಉಪ ಜಿಲ್ಲಾ ಆರೋಗ್ಯ ಶಿಣಾಧಿಕಾರಿ ಎಸ್​.ಟಿ.ಸಂಗಾ ಮಾತನಾಡಿ, ಮಹಿಳೆಯರ ಆರೋಗ್ಯ ಮತ್ತು ಆಹಾರ, ಜೀವನ ಶೈಲಿಯ ಕುರಿತು ಅರಿವು ಮೂಡಿಸಿದರು.

ಡಾ.ಬಾಲಾಜಿ ನಾಯ್ಕ, ಡಾ.ಪ್ರೇಮಚಂದ, ವೀಣಾ ಚಂದಾವರಿ, ಡಾ.ಹೀನಾ ಎಂ. ಎಸ್​. ಮಾತನಾಡಿದರು.

ಅಹಿರಸಂಗ ಸಹಕಾರ ಸಂದ ಅಧ್ಯ ವೆಂಕಟೇಶ ಕುಲಕರ್ಣಿ, ಪ್ರಗತಿಪರ ರೈತರಾದ ಭಾರತಿ ಮೇಡೆದಾರ, ವೀಣಾ ಜಂಬಗಿ ಸಸಿಗೆ ನೀರುಣಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.

ಮಹಿಳಾ ಕಿಸಾನ್​ ದಿವಸ ಪ್ರಯುಕ್ತ ಸಾಧಕ, ಉದಯೋನ್ಮುಖ ಉದ್ಯಮಶೀಲ ಕೃಷಿ ಮಹಿಳೆಯರಾದ ಭಾರತಿ ಮೇಡೆದಾರ, ವೀಣಾ ಜಂಬಗಿ, ಅಂಕಿತಾ ಪಾಟೀಲ, ಶೋಭಾ ಅಥರ್ಗಾ, ಲಕ್ಷಿ$್ಮ ಬಸವನಬಾಗೇವಾಡಿ ಅವರನ್ನು ಸನ್ಮಾನಿಸಲಾಯಿತು.

ತಾಂತ್ರಿಕ ಗೋಷ್ಠ್ಠಿಯಲ್ಲಿ ಕೃಷಿಯಲ್ಲಿ ಮಹಿಳೆಯರ ಪಾತ್ರ ಕುರಿತು ಡಾ.ಪ್ರಕಾಶ ಜಿ., ಡಾ.ಪ್ರಸಾದ ಎಂ.ಜಿ., ಮಹಿಳಾ ಸಬಲೀಕರಣದಲ್ಲಿ ಹೈನುಗಾರಿಕೆ ಪಾತ್ರದ ಕುರಿತು ಮಾಹಿತಿ ನೀಡಿದರು. 100ಕ್ಕೂ ಹೆಚ್ಚು ರೈತ ಮಹಿಳೆಯರು ಪಾಲ್ಗೊಂಡಿದ್ದರು.