ನ್ಯೂಸ್

ನ್ಯಾಷನಲ್ ಬುಕ್​ ಟ್ರಸ್ಟ್​ನಲ್ಲಿವೆ ಗುತ್ತಿಗೆ ಆಧಾರದ ವಿವಿಧ ಹುದ್ದೆ

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್​ ಬುಕ್​ ಟ್ರಸ್ಟ್​, ಇಂಡಿಯಾ (ಎನ್​ಬಿಟಿಐ) ದಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪಿಆರ್​ ಅಸಿಸ್ಟೆಂಟ್ 1 ಹುದ್ದೆ ಇದೆ. ಅಭ್ಯಥಿರ್ಗಳು ಯಾವುದೇ ಪದವಿ ಅಥವಾ ಸಮೂಹ ಸಂವಹನ / ಪತ್ರಿಕೋದ್ಯಮ ವಿಷಯದಲ್ಲಿ ಪದವಿ/ ಡಿಪ್ಲೊಮಾ ಪಾಸಾಗಿರಬೇಕು.

ಕನ್ಸಲ್ಟೆಂಟ್​ (ಎಸ್ಟಾಬ್ಲಿಷ್​ಮೆಂಟ್​)1 ಹುದ್ದೆ ಇದೆ. ಪ್ರೊಡಕ್ಷನ್​ ಎಕ್ಸಿಕ್ಯೂಟಿವ್​ 1 ಹುದ್ದೆ ಇದೆ. ಮೆಟ್ರಿಕ್ಯೂಲೇಷನ್​ ಅಥವಾ ತತ್ಸಮಾನ ಪಾಸಾಗಿರಬೇಕು ಜತೆಗೆ ಮೂರು ವರ್ಷಗಳ ಡಿಪ್ಲೊಮಾ ಪ್ರಿಂಟಿಂಗ್​ ಟೆಕ್ನಾಲಜಿ ಜತೆಗೆ ಎರಡು ವರ್ಷಗಳ ಪೂರ್ಣಾವಧಿ ಪಿಜಿ ಡಿಪ್ಲೊಮಾ ಬುಕ್​ ಪಬ್ಲಿಷಿಂಗ್​ ಕೋರ್ಸ್​ (ಬುಕ್​ ಪ್ರೊಡಕ್ಷನ್​ ಸ್ಪೆಷಲೈಸೇಷನ್​) ಆಗಿರಬೇಕು.

ಅಡ್ಮಿನ್​ ಎಕ್ಸಿಕ್ಯೂಟಿವ್​ 1 ಹುದ್ದೆ, ಮಾರ್ಕೆಟಿಂಗ್​ ಅಸಿಸ್ಟೆಂಟ್​ 1 ಹುದ್ದೆ ಇದೆ. ಪದವಿ ಪಾಸಾಗಿರಬ?ಏಕು. ಎಂಬಿಎ/ ಪಿಜಿ ಡಿಪ್ಲೊಮಾ ಮಾರ್ಕೆಟಿಂಗ್​, ಸೇಲ್ಸ್​, ಡಿಸ್ಟ್ರಿಬ್ಯೂಷನ್​ ಆ್ಯಂಡ್​ ಎಕ್ಸ್​ಪರ್ಟ್​ ವಿಷಯದಲ್ಲಿ ಎಂಬಿಎ/ ಪಿಜಿ ಡಿಪ್ಲೊಮಾ ಅಪೇಕ್ಷಣಿಯ. ಮೇಲೆ ತಿಳಿಸಿದ ಹುದ್ದೆಗಳಿಗೆ ನಿಗದಿತ ಶಿಕ್ಷಣದೊಂದಿಗೆ ಕಾರ್ಯಾನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 45 ವರ್ಷ,

ಮಾಸಿಕ 30 ಸಾವಿರ ರೂ. ದಿಂದ 40 ಸಾವಿರ . ವೇತನ ಇರುತ್ತದೆ. ಕನ್ಸಲ್ಟೆಂಟ್​ (ಎಸ್ಟಾಬ್ಲಿಷ್​ಮೆಂಟ್​) ಹುದ್ದೆಗೆ ಗರಿಷ್ಠ ವಯೋಮಿತಿ 65 ವರ್ಷ ವಯೋಮಿತಿ, ಮಾಸಿಕ 45 ಸಾವಿರ ರೂ. ವೇತನ ಇರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್​ಸೈಟ್​ನಲ್ಲಿರುವ ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ಏಪ್ರಿಲ್​ 13 ರೊಳಗೆ ಮೇಲ್​ ಮೂಲಕ ಕಳುಹಿಸಬಹುದು. ಮಾಹಿತಿಗೆ ವೆನ್​ಸೈಟ್​ https://www.nbtindia.gov.in