ನ್ಯೂಸ್

ಹಿಂದುಗಳ ಮೇಲೆ ನಿರಂತರ ದೌರ್ಜನ್ಯ: ಜಾಗತಿಕ ಮೌನ ಏಕೆ? ಬೇಸರ ವ್ಯಕ್ತಪಡಿಸಿದ Pawan Kalyan​

ಆಂಧ್ರಪ್ರದೇಶ: ಬಾಂಗ್ಲದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸೇರಿದಂತೆ ಸನಾತನ ಧರ್ಮದ ನಂಬಿಕೆ ಬಗ್ಗೆ ಹಿಯ್ಯಾಳಿಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದ್ದು, ಇಂತಹ ವಿಷಯಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಮೌನ ವಹಿಸುತ್ತಿರುವುದು ಏಕೆ ಎಂದು ಆಂಧ್ರ ಉಪಮುಖ್ಯಂತ್ರಿ ಪವನ್​ ಕಲ್ಯಾಣ್(Pawan Kalyan​)​ ಪ್ರಶ್ನಿಸಿದ್ದಾರೆ.

ಈ ಕುರಿತು ಖಾಸಗಿ ಸುದ್ದಿವಾಹಿನಿಯಲ್ಲಿ ಶುಕ್ರವಾರ ಮಾತನಾಡಿರುವ ಅವರು, '' ಹಿಂದುಗಳ ಮೇಲೆ ಹಲ್ಲೆ ನಡೆಯುತ್ತಿರುವುದು ನೋಡಿದರೆ ನಮಗೆ ತೀವ್ರ ದುಖವಾಗುತ್ತಿದೆ. ಇದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಹಿಂದುಗಳ ಮೇಲಿನ ದಾಳಿಯ ಬಗ್ಗೆ ನಮ್ಮದೇ ಹಿಂದುಗಳು ಮತ್ತು ಹಿಂದು ಕಾರ್ಯಕರ್ತರು ಕೂಡ ಮೌನವಹಿಸಿದ್ದಾರೆ. ಹಿಂದುಗಳ ಮೇಲೆ ದೌರ್ಜನ್ಯ ಮತ್ತು ದಾಳಿಗಳು ನಡೆದರೆ ಪ್ರಶ್ನಿಸಬೇಕು. ಅಲ್ಲದೆ, ಅಂತರಾಷ್ಟ್ರೀಯ ಗಮನಕ್ಕೆ ತರಬೇಕು'' ಎಂದು ಒತ್ತಾಯಿಸಿದರು.

''ಹಿಂದುಗಳ ನಂಬಿಕೆ ಮತ್ತು ಸಂಸ್ಕೃತಿಯನ್ನು ನಿರಂತರವಾಗಿ ಅಪಹಾಸ್ಯ ಮಾಡಲಾಗುತ್ತದೆ. ಯಾವುದೇ ಕಾರಣ ಇಲ್ಲದೆ ಒಂದು ಧರ್ಮವನ್ನು ಗುರಿಯಾಗಿಸುವುದು ಅನ್ಯಾಯವಾಗಿದೆ. ಯಾರೂ ಬೇರೆ ಧರ್ಮದ ಬಗ್ಗೆ ಅಪಹಾಸ್ಯ ಮಾಡಲು ಧೈರ್ಯ ಮಾಡುವುದಿಲ್ಲ. ನಟರು- ರಾಜಕಾರಣಿಗಳು ಡಬಲ್​ ಸ್ಟಾಂಡರ್ಡ್​ ಮಾತನಾಡುವುದರ ಬಗ್ಗೆ ಟೀಕಿಸಿದರ ಅವರು, ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸನಾತನ ಮಂಡಳಿ ಸ್ಥಾಪಿಸಲು ಪವನ್​ ಕರೆ ನೀಡಿದರು''.

ಇದಲ್ಲದೆ, ನಮ್ಮ ದೇವಸ್ಥಾನಗಳ ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವೈಎಸ್​ಆರ್ ಪಕ್ಷದ ಅಧಿಕಾರವಧಿಯಲ್ಲಿ ತಿರುಪತಿಯಲ್ಲಿನ ತಿರುಮಲ ವೆಂಕಟೇಶ್ವರ ದೇವಸ್ಥಾನದ ಕಲಬೆರಿಕೆ ಪ್ರಸಾದ ನೀಡಿದ್ದು, ನನಗೆ ಮಾತ್ರವಲ್ಲ, ಕೋಟ್ಯಾಂತರ ಭಕ್ತರ ಮನಸ್ಸಿಗೆ ನೋವಾಗಿದೆ ಎಂದರು, (ಏಜೆನ್ಸೀಸ್​).