ಪಿಎಫ್‌ಗೆ ಸಂಬಂಧಿಸಿ ಹಳೆಯ ನಿಯಮವನ್ನೇ ಮುಂದುವರಿಸುವಂತೆ ಒತ್ತಾಯಿಸಿ ಸಾಗರದಲ್ಲಿ ಶಾಹಿ ಗಾರ್ಮೆಂಟ್ಸ್ ಕಾರ್ಮಿಕರು ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ನಿಖಿಲ್, ವರುಣ್, ರಂಜನಾ, ಭಾವನಾ ಇತರರಿದ್ದರು. 
ನ್ಯೂಸ್

ಹಳೇ ನಿಯಮವನ್ನೇ ಮುಂದುವರಿಸಿ

ಶಾಹಿ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಪ್ರತಿಭಟನೆ

ಸಾಗರ: ಕೇಂದ್ರ ಸರ್ಕಾರ ಗಾರ್ಮೆಂಟ್ಸ್ ನೌಕರರಿಗೆ ಪ್ರಾವಿಡೆಂಟ್ ಫಂಡ್ ಕುರಿತು ಜಾರಿಗೆ ತಂದ ಹೊಸ ನಿಯಮ ರದ್ದುಪಡಿಸಿ ಹಳೆಯ ನಿಯಮ ಮುಂದುವರಿಸುವಂತೆ ಒತ್ತಾಯಿಸಿ ನಗರದ ಶಾಹಿ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಕಾರು ಅಡ್ಡಗಟ್ಟಿದರು. ಕಾರ್ಮಿಕರ ಅಹವಾಲು ಆಲಿಸಿದ ಶಾಸಕ, ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಪಿಎಫ್‌ಗೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ನಿಯಮ ಜಾರಿಗೆ ಬಂದರೆ ಗಾರ್ಮೆಂಟ್ಸ್ ಕಾರ್ಮಿಕರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಆದ್ದರಿಂದ ಹೊಸ ಕಾನೂನು ರದ್ದುಪಡಿಸಿ ಹಳೆಯ ನಿಯಮ ಮುಂದುವರಿಸಬೇಕು. ಜೀವನ ನಿರ್ವಹಣೆ ದುಬಾರಿಯಾಗಿದೆ. ಕೆಲಸಕ್ಕೆ ಅನುಗುಣವಾಗಿ ನ್ಯಾಯಸಮ್ಮತ ವೇತನ ನಿಗದಿಪಡಿಸಬೇಕು. ಕಾರ್ಮಿಕರಿಗೆ ಪಿಎಫ್, ಇಎಸ್‌ಐ, ಬೋನಸ್, ರಜೆ, ಸುರಕ್ಷಾ ಸೌಲಭ್ಯ ನೀಡಬೇಕು ಒತ್ತಾಯಿಸಿದರು

ಶಾಹಿ ಗಾರ್ಮೆಂಟ್ಸ್ ಜನರಲ್ ಮ್ಯಾನೇಜರ್ ನಿಖಿಲ್, ವರುಣ್, ಪ್ರಮುಖರಾದ ರಂಜನಾ, ಭಾವನಾ, ಶಿಲ್ಪಾ, ಆಸ್ಮಾ, ವಿನಯಾ, ಅಂಬಿಕಾ, ಶಬನಾ ಇತರರಿದ್ದರು.