ನ್ಯೂಸ್

ಸೈಕಲ್​ ಏರಲಿದ್ದಾರೆ ಕಾಂಗ್ರೆಸ್​ ನಾಯಕರು!

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿರುವ ಕಾಂಗ್ರೆಸ್​ ನಾಯಕರು ವಿಧಾನಸೌದ ಬಳಿ ನಾಳೆ ಸೈಕಲ್​ ಏರಲಿದ್ದಾರೆ.

ಕರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ ಕಾಂಗ್ರೆಸ್​ ಪ್ರತಿಭಟನೆ ನಡೆಸಲಿದೆ. ಇದನ್ನೂ ಓದಿರಿ ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿರುವ ಕೈ ಪಡೆಯು ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥ ನಡೆಸಲಿದೆ.

ಸೈಕಲ್ ಜಾಥಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೊಸ ಸೈಕಲ್ ಖರೀದಿ ಮಾಡಿದ್ದಾರೆ. ಗೇರ್ ಸೈಕಲ್ ಮತ್ತು ಅಟ್ಲಾಸ್ ಕಾಮನ್ ಸೈಕಲ್ ಎರಡನ್ನೂ ತರಿಸಿದ್ದು, ಯಾವುದು ಕಂಫರ್ಟ್ ಆಗುತ್ತೋ ಅದರಲ್ಲಿ ಜಾಥ ಹೋಗಲಿದ್ದಾರೆ. ಮುಖಂಡರಿಗೂ ಸೈಕಲ್​ನಲ್ಲಿ ಬರಲು ಸೂಚನೆ ನೀಡಲಾಗಿದೆ. ಆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕೈ ಪಡೆ ಸಜ್ಜಾಗಿದೆ.